ADVERTISEMENT

2ನೇ ಮಗುವಿನ ನಿರೀಕ್ಷೆಯಲ್ಲಿ ‘ಜೋಶ್’ ಸಿನಿಮಾ ನಟಿ ಶಮ್ನಾ ಖಾಸಿಮ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಫೆಬ್ರುವರಿ 2026, 9:40 IST
Last Updated 11 ಫೆಬ್ರುವರಿ 2026, 9:40 IST
<div class="paragraphs"><p>ನಟಿ ಶಮ್ನಾ ಖಾಸಿಮ್</p></div>

ನಟಿ ಶಮ್ನಾ ಖಾಸಿಮ್

   

ಚಿತ್ರ: ಇನ್‌ಸ್ಟಾಗ್ರಾಂ

ಬಹುಭಾಷಾ ನಟಿ ಶಮ್ನಾ ಖಾಸಿಮ್ ಅವರು ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕನ್ನಡದ ‘ಜೋಶ್’ ಸಿನಿಮಾದ ಮೂಲಕ ಗುರುತಿಸಿಕೊಂಡ ಇವರು, ಭರತನಾಟ್ಯದ ನೃತ್ಯಗಾರ್ತಿಯಾಗಿ ಕಲಾ ಜೀವನ ಆರಂಭಿಸಿದರು.

ADVERTISEMENT

ಕನ್ನಡ, ಮಲಯಾಳಂ, ತಮಿಳು, ತೆಲುಗು ಚಿತ್ರರಂಗದ ಜನಪ್ರಿಯ ನಟಿ, ರೂಪದರ್ಶಿ ಮತ್ತು ನಿಪುಣ ಶಾಸ್ತ್ರೀಯ ನೃತ್ಯಗಾರ್ತಿಯಾಗಿರುವ ಶಮ್ನಾ ಖಾಸಿಮ್ ಅವರ ಈಗ ತಾಯ್ತನವನ್ನು ಸಂಭ್ರಮಿಸುತ್ತಿದ್ದಾರೆ.

ಇತ್ತೀಚೆಗೆ ನಟಿ ಶಮ್ನಾ ಅವರು ಪತಿ ಶಾನಿದ್ ಆಸಿಫ್ ಹಾಗೂ ಮಗನೊಂದಿಗೆ ಬೇಬಿ ಬಂಪ್‌ ಫೋಟೋಶೂಟ್ ಮಾಡಿಸಿದ್ದಾರೆ. ಅದೇ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಸಿನಿಮಾಗಳ ಜೊತೆಗೆ ನಟಿ ಹಲವಾರು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಇತ್ತೀಚೆಗೆ ಬಾಲಯ್ಯ ಅವರ ಅಖಂಡ 2, ತಾಂಡವಂ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.

ನಟಿ ಮೂರು ವರ್ಷಗಳ ಹಿಂದೆ ದುಬೈ ಮೂಲದ ಉದ್ಯಮಿ ಶಾನಿದ್ ಆಸಿಫ್ ಅವರನ್ನು ವಿವಾಹವಾದರು. ದಂಪತಿಗೆ ಈಗಾಗಲೇ ಹಮ್ದಾನ್ ಆಸಿಫ್ ಅಲಿ ಎಂಬ ಮಗನಿದ್ದಾನೆ.

ಈಗ ನಟಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದು, ಬೇಬಿ ಬಂಪ್‌ ಲುಕ್‌ನಲ್ಲಿ ಫೋಟೊಗೆ ಪೋಸ್‌ ಕೊಟ್ಟಿದ್ದಾರೆ. ಇದೇ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.