ದೇವಾಲಯದ ಕಲಾಕೃತಿಯನ್ನು ವೀಕ್ಷಿಸಿದ ನಟಿ ಸಿಂಧೂ ಲೋಕನಾಥ್
ಕೃಪೆ; ಇನ್‌ಸ್ಟಾಗ್ರಾಂ
‘ಡ್ರಾಮಾ’ ಚಿತ್ರದಲ್ಲಿ ‘ಚಂದ್ರಿಕಾ’ ಪಾತ್ರದ ಮೂಲಕ ಗಮನ ಸೆಳೆದ ನಟಿ ಸಿಂಧು ಲೋಕನಾಥ್ ಅವರು ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿರುವ ರಂಗನಾಥಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ದೇವಾಲಯದ ಕಲಾಕೃತಿಯನ್ನು ವೀಕ್ಷಿಸಿದ ಸಿಂಧು, ‘ಚಿತ್ರಗಳು ನ್ಯಾಯ ಹೊಂದಿಸುವುದಿಲ್ಲ’ ಎಂಬ ಅಡಿಬರಹ ನೀಡಿದ್ದಾರೆ.
ರಂಗನಾಥಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ ನಟಿ ಸಿಂಧು ಲೋಕನಾಥ್
ಸಿಂಧು ಅವರು ಆಗಾಗ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಕ್ಷಣಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿಕೊಳ್ಳುತ್ತಿರುತ್ತಾರೆ.
'ಡ್ರಾಮಾ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದ ಸಿಂಧು ಅವರು, ಬಳಿಕ ಸಾಲು ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ‘ಯಾರೇ ಕೂಗಾಡಲಿ’, ‘ಕೇಸ್ ನಂಬರ್.18/9’, ‘ಕಾಫಿ ವಿಥ್ ಮೈ ವೈಫ್’, ‘ಎಂದೆಂದಿಗೂ ನಿನಗಾಗಿ’, ‘ಲವ್ ಇನ್ ಮಂಡ್ಯ’, ‘ಕಾಣದಂತೆ ಮಾಯವಾದನು’ ಸೇರಿ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ.
ಸದ್ಯ, ಸಿಂಧು ಅವರು ಇತ್ತೀಚೆಗೆ ‘ಅಂಡರ್‌ಕವರ್ ಬಾಸ್’ ವೆಬ್ ಸೀರಿಸ್‌ನಲ್ಲಿ ಕಾಣಿಸಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.