
ಉದ್ಯಮಿ ಆನಂದ್ ಅಹುಜಾ ಹಾಗೂ ಬಾಲಿವುಡ್ ನಟಿ ಸೋನಮ್ ಕಪೂರ್ ಎರಡನೇ ಮಗುವಿನ ನೀರಿಕ್ಷೆಯಲ್ಲಿದ್ದಾರೆ. ಈ ಬಗ್ಗೆ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಈ ಕುರಿತು ಮಾಹಿತಿ ಹಂಚಿಕೊಂಡಿರುವ ನಟಿ ಸೋನಮ್ ಕಪೂರ್, ಗುಲಾಬಿ ಬಣ್ಣದ ಉಡುಗೆ ಧರಿಸಿ ಕ್ಲಿಕ್ಕಿಸಿಕೊಂಡ ಚಿತ್ರಗಳನ್ನು ಹಂಚಿಕೊಂಡು ‘ತಾಯಿ’ ಎಂದು ಬರೆದುಕೊಂಡಿದ್ದಾರೆ.
ಉದ್ಯಮಿ ಆನಂದ್ ಅಹುಜಾ ಅವರು ನಟಿ ಸೋನಮ್ ಜತೆ 2018ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 2022ರಲ್ಲಿ ತಮ್ಮ ಮೊದಲ ಮಗು ವಾಯು ಕಪೂರ್‌ಗೆ ಜನ್ಮ ನೀಡಿದ್ದ ದಂಪತಿ, ಈಗ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಸೋನಮ್ ಅವರು ಮದುವೆಯ ಬಳಿಕ ಸಿನಿಮಾರಂಗದಿಂದ ದೂರ ಉಳಿದಿದ್ದಾರೆ. 2018ರಿಂದ ಇಲ್ಲಿಯವರೆಗೂ ಅವರು ಎರಡು ಮೂರು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.
ನಟಿ ಸೋನಮ್ ಕಪೂರ್, ‘ನೀರ್ಜಾ’, ‘ರಾಂಝಾನಾ’ ಮತ್ತು ‘ದೆಹಲಿ 6’ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.