ಚಿತ್ರ ಕೃಪೆ: @PrasanthVarma
ಪ್ರಶಾಂತ್ ವರ್ಮಾ ನಿರ್ದೆಶನದ 'ಅಧೀರ' ಚಿತ್ರದ ಫಸ್ಟ್ ಲುಕ್ ಅನ್ನು ಚಿತ್ರ ತಂಡ ಅನಾವರಣಗೊಳಿಸಿದೆ.
ಪೌರಾಣಿಕ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಕಲ್ಯಾಣ್ ದಾಸರಿ ಹಾಗೂ ಎಸ್.ಜೆ. ಸೂರ್ಯ ಅವರು ಬಣ್ಣ ಹಚ್ಚಿದ್ದಾರೆ.
ಸಿನಿಮಾ ಪೋಸ್ಟರ್ ನೋಡಿದ ಅಭಿಮಾನಿಗಳು ‘ಚಿತ್ರದ ಮೊದಲ ನೋಟ ನೋಡಿದ ಬಳಿಕ ಸಿನಿಮಾದ ಮೇಲೆ ಕುತೂಹಲ ಹೆಚ್ಚಾಗಿದೆ‘ ಎಂದು ಸಾಮಾಜಿಕ ಮಾಧ್ಯಮದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಚಿತ್ರದ ಮೊದಲ ನೋಟದ ಬಗ್ಗೆ ಪ್ರಶಾಂತ್ ವರ್ಮಾ ಅವರು ‘ಜಗತ್ತನ್ನು ಕತ್ತಲೆ ಆವರಿಸಿದಾಗ, ಭರವಸೆಯು ಬೆಳಕಾಗಿ ಹೊರಹೊಮ್ಮುತ್ತದೆ‘ ಎಂದು ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ.
ತೆಲುಗು ಭಾಷೆಯ ಈ ಸಿನಿಮಾವನ್ನು ಪ್ರಶಾಂತ್ ವರ್ಮಾ ನಿರ್ದೆಶಿಸಿದ್ದರೆ, ಆರ್ಕೆಡಿ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ರಿವಾಜ್ ರಮೇಶ್ ದುಗ್ಗಲ್ ಅವರು ನಿರ್ಮಾಣ ಮಾಡಿದ್ದಾರೆ.
ಅಧೀರ ಚಿತ್ರದಲ್ಲಿ ಶಿವೇಂದ್ರ ಛಾಯಾಗ್ರಹಣ, ಶ್ರೀಚರಣ್ ಪಕಲಾ ಸಂಗೀತ ಸಂಯೋಜಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.