ADVERTISEMENT

ಅರ್ಜುನ್ ಜನ್ಯ ನಿರ್ದೇಶನದ ‘45' ಚಿತ್ರದ ಹಾಡು ನವೆಂಬರ್ 1ರಂದು ಬಿಡುಗಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಅಕ್ಟೋಬರ್ 2025, 9:08 IST
Last Updated 27 ಅಕ್ಟೋಬರ್ 2025, 9:08 IST
<div class="paragraphs"><p>ಚಿತ್ರ ಕೃಪೆ:&nbsp;<a href="https://x.com/aanandaaudio">@aanandaaudio</a></p></div>

ಚಿತ್ರ ಕೃಪೆ: @aanandaaudio

   

ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ ರಮೇಶ್ ರೆಡ್ಡಿ ನಿರ್ಮಾಣದ '45' ಚಿತ್ರದ ‘Afro ಟಾಪಾಂಗ್’ ಹಾಡು ನವೆಂಬರ್ 1ರಂದು ಬಿಡುಗಡೆಗೊಳ್ಳಲಿದೆ. ಈ ಬಗ್ಗೆ ರಾಜ್ ಬಿ ಶೆಟ್ಟಿ ಅವರು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಹಾಡು ಕುರಿತು ಮಾಹಿತಿ ಹಂಚಿಕೊಂಡಿರುವ ರಾಜ್‌ ಬಿ. ಶೆಟ್ಟಿ ಅವರು, '45 ಚಿತ್ರದ ‘Afro ಟಾಪಾಂಗ್’ ಹಾಡಿನಲ್ಲಿ ಆಫ್ರಿಕಾದ ಡ್ಯಾನ್ಸರ್ ಹಾಗೂ ಶಿವರಾಜಕುಮಾರ್, ಉಪೇಂದ್ರ ಅವರು ಅದ್ಭುತವಾಗಿ ಹೆಜ್ಜೆಹಾಕಿದ್ದಾರೆ' ಎಂದಿದ್ದಾರೆ.

ADVERTISEMENT

‘45’ ಆ್ಯಕ್ಷನ್ ಚಿತ್ರವು ಮನುಷ್ಯನ ಸಾವಿನ ನಂತರದ ಕಥಾ ಹಂದರವನ್ನು ಹೊಂದಿದ್ದು, ಹಾಸ್ಯದ ಹೊನಲನ್ನೇ ಹರಿಸಲಿದೆ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಅವರೇ ಕಥೆ-ಚಿತ್ರಕಥೆ ಬರೆದು ಸಂಗೀತ ಸಂಯೋಜಿಸಿದ್ದಾರೆ. ಬೆಂಗಳೂರು, ಮೈಸೂರು ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲೂ ಮೂಡಿಬರಲಿದೆ ಎಂದು ಚಿತ್ರತಂಡ ಈ ಹಿಂದೆ ಹೇಳಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.