
ನವದೆಹಲಿ: ನಟ ರಜನಿಕಾಂತ್ ಮಗಳು ಐಶ್ವರ್ಯಾ ರಜನಿಕಾಂತ್ ನಿರ್ದೇಶನದ ಮುಂಬರುವ ಚಿತ್ರಕ್ಕೆ ‘ ಟೆಕ್ಸ್ಲಾ’ ಎಂದು ಹೆಸರಿಡಲಾಗಿದ್ದು, ಚಿತ್ರದ ಟೀಸರ್ ಅನ್ನು ಇಂದು (ಫೆಬ್ರುವರಿ 28) ಟೀಸರ್ ಬಿಡುಗಡೆ ಮಾಡಲಾಗಿದೆ.
ತಾತ್ಕಾಲಿಕವಾಗಿ ‘#KRG09’ ಎಂಬ ಶೀರ್ಷಿಕೆ ಹೊಂದಿದ್ದ ಸಿನಿಮಾಗೆ ‘ಟೆಕ್ಸ್ಲಾ’ ಎಂದು ಹೆಸರು ಘೋಷಣೆ ಮಾಡಲಾಗಿದೆ.
ಬಿಡುಗಡೆಯಾದ ಟೀಸರ್‌ನಲ್ಲಿ ಹಳ್ಳಿಯ ಚಿತ್ರಣವಿದ್ದು, ಮೇಲ್ನೋಟಕ್ಕೆ ಬಾಲಕನೊಬ್ಬನ ಕಥೆ ಹೇಳುವಂತಿದೆ. ಸದ್ಯ, ಬಿಡುಗಡೆಯಾಗಿರುವ ಚಿತ್ರದ ಟೀಸರ್ ಅನ್ನು ರಜನಿಕಾಂತ್ ಸೇರಿದಂತೆ ಅನೇಕರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿತ್ತಿದ್ದಾರೆ.
ಈ ಚಿತ್ರವನ್ನು ಕಣ್ಣನ್ ರವಿ ಗ್ರೂಪ್ ನಿರ್ಮಾಣ ಮಾಡುತ್ತಿದೆ. ಸಂಗೀತ ನಿರ್ದೇಶಕ ಯುವನ್ ಶಂಕರ್ ರಾಜಾ ಅವರು ಸಂಗೀತ ಸಂಯೋಜನೆ ಮಾಡಲಿದ್ದಾರೆ.
ಐಶ್ವರ್ಯಾ ರಜನಿಕಾಂತ್ ಅವರು 2024ರಲ್ಲಿ ತೆರೆಕಂಡ 'ಲಾಲ್ ಸಲಾಮ್' ಚಿತ್ರವನ್ನು ನಿರ್ದೇಶನ ಮಾಡಿದ್ದರು. ಈ ಚಿತ್ರದಲ್ಲಿ ತಂದೆ ರಜನಿಕಾಂತ್ ಅವರು ನಟನೆ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.