ADVERTISEMENT

ಜಗತ್ತಿನ ಅತಿ ಎತ್ತರದ ಥಿಯೇಟರ್‌ನಲ್ಲಿ ಬೆಲ್‌ ಬಾಟಂ ಸಿನಿಮಾ ಪ್ರದರ್ಶನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಆಗಸ್ಟ್ 2021, 6:41 IST
Last Updated 30 ಆಗಸ್ಟ್ 2021, 6:41 IST
ಬೆಲ್ ಬಾಟಂ ಸಿನಿಮಾವನ್ನು ಜಗತ್ತಿನ ಅತಿ ಎತ್ತರದ ಥಿಯೇಟರ್‌ನಲ್ಲಿ ಪ್ರದರ್ಶಿಸಲಾಗಿದೆ..
ಬೆಲ್ ಬಾಟಂ ಸಿನಿಮಾವನ್ನು ಜಗತ್ತಿನ ಅತಿ ಎತ್ತರದ ಥಿಯೇಟರ್‌ನಲ್ಲಿ ಪ್ರದರ್ಶಿಸಲಾಗಿದೆ..   

ಬೆಂಗಳೂರು: ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಹೊಸ ಸಿನಿಮಾ ‘ಬೆಲ್ ಬಾಟಂ’ ಅನ್ನು ಲಡಾಖ್‌ನಲ್ಲಿ ಜಗತ್ತಿನ ಅತಿ ಎತ್ತರದ ಥಿಯೇಟರ್‌ನಲ್ಲಿ ಪ್ರದರ್ಶಿಸಲಾಗಿದೆ.

ಪಿಕ್ಚರ್‌ಟೈಮ್ ಡಿಜಿಪ್ಲೆಕ್ಸ್ ಎಂಬ ಕಂಪನಿ, ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನ ಲೇಹ್‌ನಲ್ಲಿ ಮೊದಲ ಮೊಬೈಲ್ ಸಿನಿಮಾ ಥಿಯೇಟರ್ ಸ್ಥಾಪಿಸಿದೆ.

ಬಳಿಕ ಅಲ್ಲಿ, ಬೆಲ್ ಬಾಟಂ ಸಿನಿಮಾ ಪ್ರದರ್ಶಿಸಲಾಗಿದೆ. ಈ ಪ್ರದೇಶವು ಸಮುದ್ರಮಟ್ಟಕ್ಕಿಂದ 11,562 ಅಡಿ ಎತ್ತರವಿದ್ದು, ಜಗತ್ತಿನ ಅತಿ ಎತ್ತರದ ತಾಣದಲ್ಲಿ ಪ್ರದರ್ಶನಗೊಂಡ ಸಿನಿಮಾ ಎಂಬ ಖ್ಯಾತಿಗೆ ಪಾತ್ರವಾಗಿದೆ.

ADVERTISEMENT

ನಟ ಅಕ್ಷಯ್ ಕುಮಾರ್ ಈ ಕುರಿತು ಸಂತಸ ಹಂಚಿಕೊಂಡಿದ್ದು, ಟ್ವೀಟ್ ಮಾಡಿದ್ದಾರೆ.

ಬೆಲ್ ಬಾಟಂ ಚಿತ್ರ ಆಗಸ್ಟ್ 19ರಂದು ಬಿಡುಗಡೆಯಾಗಿದ್ದು, ಆ. 22ರಂದು ಭಾರತೀಯ ಸೇನೆ ಮತ್ತು ಕೇಂದ್ರೀಯ ಉದ್ಯಮ ಭದ್ರತಾ ಪಡೆಯ ಸಿಬ್ಬಂದಿಗೆ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.