
ಅಲ್ಲು ಅರ್ಜುನ್ ಸಹೋದರ ಸೀರಿಸ್
ಚಿತ್ರ: ಇನ್‌ಸ್ಟಾಗ್ರಾಂ
ತೆಲುಗಿನ ಖ್ಯಾತ ನಟ ಅಲ್ಲು ಅರ್ಜುನ್ ಅವರ ಸಹೋದರ ಅಲ್ಲು ಸಿರೀಶ್ ಅವರು ವಿಹಾರ ನೌಕೆಯಲ್ಲಿ ಅದ್ಧೂರಿಯಾಗಿ ಪ್ರಿ ವೆಡ್ಡಿಂಗ್ ಪಾರ್ಟಿ ಮಾಡಿದ್ದಾರೆ. ದುಬೈನ ಸಮುದ್ರದ ಮಧ್ಯದಲ್ಲಿ ಅಲ್ಲು ಸಿರೀಶ್ ಹಾಗೂ ನಯನಿಕಾ ಪ್ರಿ ವೆಡ್ಡಿಂಗ್ ಪಾರ್ಟಿ ಮಾಡಿದ್ದಾರೆ.
ಅಲ್ಲು ಸಿರೀಶ್ ಮತ್ತು ನಯನಿಕಾ
ಜ.30 ಹಾಗೂ 31ರಂದು ನಡೆದ ಈ ಪ್ರಿ ವೆಡ್ಡಿಂಗ್ ಪಾರ್ಟಿಯಲ್ಲಿ ನಟ ಅಲ್ಲು ಅರ್ಜುನ್ ದಂಪತಿ, ನಟಿ, ಗಾಯಕಿ ಸೋಫಿ ಚೌಧರಿ, ನಟ ನಿತಿನ್ ಅವರ ಪತ್ನಿ ಶಾಲಿನಿ ಕಂದುಕುರಿ, ಮಿಸ್ ಇಂಡಿಯಾ ಫೈನಲಿಸ್ಟ್ ರಕ್ಷಿತಾ ಹರಿಮೂರ್ತಿ ಮತ್ತು ಅವರ ಸಹೋದರ ಬಾಬಿ ಸೇರಿದಂತೆ ಕೆಲ ಸ್ನೇಹಿತರು ಭಾಗಿಯಾಗಿದ್ದರು.
ನಯನಿಕಾ
ದುಬೈನಲ್ಲಿ ನಡೆದ ಅಲ್ಲು ಸಿರೀಶ್ ಮತ್ತು ನಯನಿಕಾ ಅವರ ಪ್ರಿ ವೆಡ್ಡಿಂಗ್ ಪಾರ್ಟಿಯ ಫೋಟೊಗಳು ಮತ್ತು ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ವಿವಾಹ ಪೂರ್ವ ಸಮಾರಂಭದಲ್ಲಿ ಅಲ್ಲು ಅರ್ಜುನ್, ಪತ್ನಿ ಸ್ನೇಹಾ ರೆಡ್ಡಿ ಅವರು ಮಸ್ತ್ ಮಜಾ ಮಾಡಿದ್ದನ್ನು ವಿಡಿಯೊದಲ್ಲಿ ಕಾಣಬಹುದು.
ನಯನಿಕಾ, ಅಲ್ಲು ಸಿರೀಶ್, ಅಲ್ಲು ಅರ್ಜುನ್
ಅಕ್ಟೋಬರ್ 31ರಂದು ಹೈದರಾಬಾದ್‌ನಲ್ಲಿ ತಮ್ಮ ಕುಟುಂಬಸ್ಥರ ಸಮ್ಮುಖದಲ್ಲಿ ಸಿರೀಶ್ ಮತ್ತು ನಯನಿಕಾ ಉಂಗುರ ಬದಲಾಯಿಸಿಕೊಂಡರು. ಮುಂದಿನ ತಿಂಗಳು ಮಾರ್ಚ್ 6ರಂದು ಸಿರೀಶ್ ಮತ್ತು ನಯನಿಕಾ ವಿವಾಹವಾಗಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.