ಅನಂತನಾಗ್-ಲಕ್ಷ್ಮಿ
ದೀರ್ಘಕಾಲದ ಬಳಿಕ ಅನಂತನಾಗ್ ಮತ್ತು ಲಕ್ಷ್ಮಿ ತೆರೆಯ ಮೇಲೆ ಒಂದಾಗಿದ್ದಾರೆ. ‘ರಾಜದ್ರೋಹಿ’ ಚಿತ್ರದಲ್ಲಿ ಅವರು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಸಮರ್ಥರಾಜ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಧನುಷ್ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಮಹದೇವಯ್ಯ ನಿರ್ಮಾಣ ಮಾಡಿದ್ದಾರೆ.
‘ಅಪ್ಪ-ಅಮ್ಮ ಕಣ್ಣಿನ ಮುಂದೆ ಇದ್ದರೂ ಗುರುತಿಸಲಾಗದಂಥ ಮಕ್ಕಳ ಸ್ಥಿತಿ ಒಂದೆಡೆ, ಅದೇ ರೀತಿ ತಂದೆ-ತಾಯಿಗೆ ಇವರೇ ತಮ್ಮ ಮಕ್ಕಳೆಂದು ತಿಳಿದಿರುವುದಿಲ್ಲ. ಇಂಥ ಸಂದರ್ಭವನ್ನು ಒಂದು ಕುಟುಂಬ ಹೇಗೆ ಎದುರಿಸುತ್ತದೆ ಎಂಬುದೇ ಚಿತ್ರಕಥೆ. ಇದೇ ರೀತಿ ಬೇರೆ ಬೇರೆ ಅವಘಡಗಳು ಸಂಭವಿಸಿದಾಗ ಚಿತ್ರ ಹೇಗೆಲ್ಲ ತಿರುವುಗಳು ಪಡೆದುಕೊಳ್ಳುತ್ತದೆ ಎಂಬುದನ್ನು ಚಿತ್ರದಲ್ಲಿಯೇ ನೋಡಬೇಕು’ ಎನ್ನುತ್ತಾರೆ ನಿರ್ದೇಶಕರು.
ಅಭಿಜಿತ್, ಒರಟ ಪ್ರಶಾಂತ್, ನೀನಾಸಂ ಅಶ್ವಥ್, ಅಚ್ಯುತಕುಮಾರ್, ಕುರಿಬಾಂಡ್ ಸುನಿಲ್, ಬ್ಯಾಂಕ್ ಜನಾರ್ದನ್ ಮುಂತಾದವರು ನಟಿಸಿದ್ದಾರೆ. ರಘು ತುಮಕೂರು ಸಂಗೀತ, ಸತೀಶ್ ಮನೋಹರ್-ವೀನಸ್‌ಮೂರ್ತಿ-ನಾಗರಾಜ್ ಛಾಯಾಚಿತ್ರಗ್ರಹಣ, ಕುಮಾರ್ ಕೊಟಿಕೊಪ್ಪ ಸಂಕಲನ ಚಿತ್ರಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.