ADVERTISEMENT

ಫಿಲಂ ಫೇರ್ ಪ್ರಶಸ್ತಿ ಪಡೆದುಕೊಂಡ ಚಂದನವನದ ನಟಿ ಅಂಕಿತಾ ಅಮರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಫೆಬ್ರುವರಿ 2026, 6:00 IST
Last Updated 25 ಫೆಬ್ರುವರಿ 2026, 6:00 IST
<div class="paragraphs"><p>ಫಿಲಂ ಫೇರ್ ಪ್ರಶಸ್ತಿ ಪಡೆದುಕೊಂಡ&nbsp;&nbsp;ಟಿ ಅಂಕಿತಾ ಅಮರ್</p></div>

ಫಿಲಂ ಫೇರ್ ಪ್ರಶಸ್ತಿ ಪಡೆದುಕೊಂಡ  ಟಿ ಅಂಕಿತಾ ಅಮರ್

   

ಕೃಪೆ: ಇನ್ಸ್ಟಾಗ್ರಾಮ್

ಚಂದನವನದ ತಾರೆ ಅಂಕಿತಾ ಅಮರ್ ಅವರು ಫಿಲಂ ಫೇರ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ADVERTISEMENT

ಅಂಕಿತಾ ಅಮರ್ ಅವರು ಅತ್ಯುತ್ತಮ ನಟಿ ವಿಭಾಗದಲ್ಲಿ ಫಿಲಂ ಫೇರ್ ವಿಮರ್ಶಕರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಈ ಕುರಿತು ನಟಿ ಅಂಕಿತಾ ಅವರು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. 

ಕೆಲ ದಿನಗಳ ಹಿಂದೆ ಕೇರಳದಲ್ಲಿ  ಫಿಲಂ ಫೇರ್ ಪ್ರಶಸ್ತಿ ಕಾರ್ಯಕ್ರಮ ನಡೆದಿತ್ತು.

ನಟಿ ಅಂಕಿತಾ ಅಮರ್ ಅವರಿಗೆ ‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರಕ್ಕಾಗಿ ಫಿಲಂ ಫೇರ್ ಪ್ರಶಸ್ತಿ ಲಭಿಸಿದೆ. 

‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರದ  ಅನಾಮಿಕಾ ಪಾತ್ರವು ವಿಮರ್ಶಕರ ಮೆಚ್ಚುಗೆ ಪಡೆದುಕೊಂಡಿದೆ.

ಪ್ರಶಸ್ತಿ ಪಡೆದ ಅಂಕಿತಾ ಅಮರ್ , ‘ಕೃಷ್ಣ ಸುಂದರಿ' ನನ್ನ ಕೈಯಲ್ಲಿ ಇದ್ದರೂ ಕೂಡ ಇದೊಂದು ಕನಸಿನಂತೆ ಅನುಭವವಾಗುತ್ತಿದೆ. ಕನ್ನಡದ ಕಣ್ಮಣಿಗಳಿಗೆ, ಈ ಚಿತ್ರದ ನಿರ್ದೇಶಕರಿಗೆ, ಚಿತ್ರತಂಡಕ್ಕೆ ಕೃತಜ್ಞತೆ ತಿಳಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

‘ಶಾರದಾಂಬೆಯ ಕೃಪೆಯಿಂದ ಗಾಜಿನ ಬಳೆಯಷ್ಟೇ ಅಲ್ಲ, ಉಡೋದಕ್ಕೆ ಅಂಬೆ ಸೀರೆ ಸಿಕ್ಕಿರುವುದಕ್ಕೆ ಖುಷಿ ಇದೆ' ಎಂದು ಅಂಕಿತಾ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಅಂಕಿತಾ ಅಮರ್ ಅವರು ‘ನಮ್ಮನೆ ಯುವರಾಣಿ’ ಧಾರಾವಾಹಿಯಲ್ಲಿ ಮೀರಾ ಪಾತ್ರದ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.