ADVERTISEMENT

ಜನಪ್ರಿಯ ನಿರೂಪಕಿ ಅನುಶ್ರೀ ಹೊಸ ವರ್ಷ ಆಚರಿಸಿದ್ದು ಹೇಗೆ? ಇಲ್ಲಿದೆ ಸೀಕ್ರೆಟ್...

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಜನವರಿ 2026, 12:39 IST
Last Updated 21 ಜನವರಿ 2026, 12:39 IST
<div class="paragraphs"><p>ನಿರೂಪಕಿ ಅನುಶ್ರೀ</p></div>

ನಿರೂಪಕಿ ಅನುಶ್ರೀ

   

ಚಿತ್ರ: ಇನ್‌ಸ್ಟಾಗ್ರಾಂ

ಕನ್ನಡದ ನಟಿ, ನಿರೂಪಕಿ​ ಅನುಶ್ರೀ ಯಾರಿಗೇ ತಾನೇ ಗೊತ್ತಿಲ್ಲ ಹೇಳಿ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಅನುಶ್ರೀ ಎಂದರೆ ಅಚ್ಚುಮೆಚ್ಚು. ಕನ್ನಡ ಕಿರುತೆರೆ ಲೋಕದಲ್ಲಿ ಮಿಂಚುತ್ತಿರುವ ಅನುಶ್ರೀ ಅವರು ಸದ್ಯ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ರಿಯಾಲಿಟಿ ಶೋನಲ್ಲಿ ನಿರೂಪಕಿಯಾಗಿದ್ದಾರೆ.

ನಿರೂಪಕಿ ಅನುಶ್ರೀ

ADVERTISEMENT

ಚಟಪಟ ಅಂತ ಮಾತನಾಡುವ ಮೂಲಕ ಎಲ್ಲರ ಗಮನಸೆಳೆದಿರುವ ಅನುಶ್ರೀ, ತಮ್ಮದೇ ಆದ ಅಭಿಮಾನಿ ಬಳಗವನ್ನ ಹೊಂದಿದ್ದಾರೆ. ಹಲವು ದಶಕಗಳಿಂದ ಕನ್ನಡ ಕಿರುತೆರೆ ಲೋಕದಲ್ಲಿ ಕಮಾಲ್ ಮಾಡುತ್ತಾ ಬಂದಿರುವ ಅನುಶ್ರೀ ಅವರು ಸರಿಗಮಪ, ಕಾಮಿಡಿ ಕಿಲಾಡಿಗಳು, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೇರಿದಂತೆ ಹಲವು ಯಶಸ್ವಿ ರಿಯಾಲಿಟಿ ಶೋಗಳನ್ನು ತಮ್ಮ ಅದ್ಭುತ ನಿರೂಪಣ ಶೈಲಿಯಿಂದ ನಡೆಸಿಕೊಂಡು ಬಂದಿದ್ದಾರೆ.

ನಿರೂಪಕಿ ಅನುಶ್ರೀ

ಅಷ್ಟೇ ಅಲ್ಲದೇ ಕನ್ನಡ ಕಿರುತೆರೆಯಲ್ಲಿ ಧಾರಾವಾಹಿಗಳು ಹಾಗೂ ಚಂದನವನದಲ್ಲಿ ಅಭಿನಯಿಸುತ್ತಾ ನಟಿ ಕಮ್ ನಿರೂಪಕಿಯಾಗಿ ಹೊರಹೊಮ್ಮಿರುವ ಅನುಶ್ರೀ ಅವರು ಮುಖ್ಯವಾಗಿ ಭೂಮಿತಾಯಿ, ಬೆಳ್ಳಿ ಕಿರಣ, ಟ್ಯೂಬ್‌ಲೈಟ್ ಬೆಂಕಿಪಟ್ಟಣ, ಉತ್ತಮ ವಿಲಿಯನ್, ಉಪ್ಪು ಹುಲಿ ಖಾರ ಸೇರಿದಂತೆ ಮುಂತಾದ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.

ನಿರೂಪಕಿ ಅನುಶ್ರೀ

ಇನ್ನು, ಸಾಮಾಜಿಕ ಮಾಧ್ಯಮದಲ್ಲಿ ತುಂಬಾನೆ ಸಕ್ರಿಯರಾಗಿರುವ ನಿರೂಪಕಿ ಅನುಶ್ರೀ ಅವರು ಆಗಾಗ ಹೊಸ ಹೊಸ ಫೋಟೊಗಳನ್ನು ಹಂಚಿಕೊಳ್ಳುತ್ತಾ, ಅಭಿಮಾನಿಗಳ ಜೊತೆಗೆ ಸಂಪರ್ಕದಲ್ಲಿ ಇರುತ್ತಾರೆ. ಜೊತೆಗೆ ಇನ್‌ಸ್ಟಾಗ್ರಾಂ ಲೈವ್‌ಗೆ ಬಂದು ಅಭಿಮಾನಿಗಳ ಯೋಗಕ್ಷೇಮವನ್ನು ವಿಚಾರಿಸುತ್ತಾ ಇರುತ್ತಾರೆ.

ನಿರೂಪಕಿ ಅನುಶ್ರೀ

ಕೇವಲ ಸಿನಿಮಾ, ಧಾರಾವಾಹಿಗಳು ಅಷ್ಟೇ ಅಲ್ಲದೇ ಕನ್ನಡದ ಬಿಗ್‌ಬಾಸ್‌ ಸೀಸನ್ 1ಕ್ಕೂ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು. ಅದು ಅವರ ಜೀವನವನ್ನು ಮತ್ತೊಂದು ಹಂತಕ್ಕೆ ಕರೆದುಕೊಂಡು ಹೋಗಲು ಸಹಾಯ ಮಾಡಿತ್ತು.

ನಿರೂಪಕಿ ಅನುಶ್ರೀ

ನಿರೂಪಕಿ ಅನುಶ್ರೀ ಅವರಿಗೆ ಪುನೀತ್‌ ರಾಜ್‌ಕುಮಾರ್ ಎಂದರೆ ಅಚ್ಚುಮೆಚ್ಚು. ಅಪ್ಪು ಅವರ ಹೊಸ ಸಿನಿಮಾಗಳು ಬಂತೆಂದರೆ ಅನುಶ್ರೀ ಅವರು ಮೊದಲು ಸಂದರ್ಶನ ಮಾಡುತ್ತಿದ್ದರು. ಅಷ್ಟರ ಮಟ್ಟಿಗೆ ಅಪ್ಪು ಅವರ ದೊಡ್ಡ ಅಭಿಮಾನಿಯಾಗಿದ್ದರು. ಇದಕ್ಕೆ ಸಾಕ್ಷಿ ಎಂಬಂತೆ ಅಪ್ಪು ಅವರ ನಿಧನ ಬಳಿಕ ಇನ್‌ಸ್ಟಾಗ್ರಾಂ ಖಾತೆಯಲ್ಲಿ ‘ಅನುಶ್ರೀ Anchor APPU FAN’ ಎಂದು ಬರೆದುಕೊಂಡಿದ್ದಾರೆ.

ನಿರೂಪಕಿ ಅನುಶ್ರೀ, ಪುನೀತ್‌ ರಾಜ್‌ಕುಮಾರ್

ಇನ್ನು, ಸಮಯ ಸಿಕ್ಕಿದಾಗಲೆಲ್ಲಾ ನಿರೂಪಕಿ ಅನುಶ್ರೀ ಅವರು ಸಾಮಾಜಿಕ ಮಾಧ್ಯಮದಲ್ಲಿ ಶೋ ಸೆಟ್‌ನಲ್ಲಿ ಕಳೆದ ಕ್ಷಣಗಳ ಬಗ್ಗೆ ಫೋಟೊಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಜೊತೆಗೆ ಅಭಿಮಾನಿಗಳ ಪ್ರತಿಕ್ರಿಯೆಗಾಗಿ ನಿರೀಕ್ಷಿಸುತ್ತಾ ಇರುತ್ತಾರೆ.

ನಿರೂಪಕಿ ಅನುಶ್ರೀ

ಇತ್ತೀಚೆಗೆ ಅನುಶ್ರೀ ಅವರು ಕುಟುಂಬಸ್ಥರು, ಬಂಧು ಮಿತ್ರರ ಸಮ್ಮುಖದಲ್ಲಿ ರೋಷನ್ ಎಂಬುವವರ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಇಬ್ಬರ ಮದುವೆ ಬೆಂಗಳೂರಿನ ಹೊರವಲಯದ ಸಂಭ್ರಮ ಬೈ ಸ್ವಾನ್‌ಲೈನ್ಸ್ ಸ್ಟುಡಿಯೋಸ್ ತಿಟ್ಟಹಳ್ಳಿ, ಕಗ್ಗಲಿಪುರದಲ್ಲಿ ನಡೆದಿತ್ತು.

ಪತಿ ರೋಷನ್‌, ನಿರೂಪಕಿ ಅನುಶ್ರೀ 

ಕೊಡಗು ಮೂಲದ ರಾಮಮೂರ್ತಿ ಹಾಗೂ ಸಿಸಿಲಿಯಾ ಅವರ ಪುತ್ರ ರೋಷನ್ ಜೊತೆ ಅನುಶ್ರೀ ವಿವಾಹವಾಗಿದ್ದಾರೆ. ಮದುವೆ ಬಳಿಕ ಅನುಶ್ರೀ ಅವರು ಪತಿ ರೋಷನ್ ಜೊತೆಗೆ ಕ್ಯಾತನಮಕ್ಕಿ ಚಾರಣಕ್ಕೆ ಹೋಗಿದ್ದಾರೆ.

ಪತಿ ರೋಷನ್‌, ನಿರೂಪಕಿ ಅನುಶ್ರೀ 

2026 ಹೊಸ ವರ್ಷಕ್ಕೆ ಪತಿಯ ಜೊತೆಗೆ ಚಾರಣಕ್ಕೆ ಹೋಗಿದ್ದ ಅನುಶ್ರೀ ಅವರು ‘ನಿಸರ್ಗದಲ್ಲಿರುವಷ್ಟು ನೆಮ್ಮದಿ ಇನ್ನೆಲ್ಲಿ, ಇದರ ಸೌಂದರ್ಯ ಎಂದಿಗೂ ಆಗದು ಖಾಲಿ’ ಎಂದು ಆ ಸ್ಥಳದ ಬಗ್ಗೆ ಮನಸಾರೆ ಹಾಡಿ ಹೊಗಳಿದ್ದಾರೆ.

ಪತಿ ರೋಷನ್‌, ನಿರೂಪಕಿ ಅನುಶ್ರೀ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.