ಅರ್ಜುನ್ ಜನ್ಯ ಅವರಿಗೆ ಅತ್ಯುತ್ತಮ ಸಂಗೀತ ನಿರ್ದೇಶನ ಪ್ರಶಸ್ತಿಯನ್ನು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ ನೀಡಿದರು. ಸಚಿವ ಶಿವರಾಜ್ ತಂಗಡಗಿ, ಟಿಪಿಎಂಎಲ್‌ನ ನಿರ್ದೇಶಕಿ ಸೌಭಾಗ್ಯ ಲಕ್ಷ್ಮಿ ಇದ್ದರು.
ಅತ್ಯುತ್ತಮ ಸಂಗೀತ ನಿರ್ದೇಶನ- ಅರ್ಜುನ್ ಜನ್ಯ, ಚಿತ್ರ: ಕೃಷ್ಣಂ ಪ್ರಣಯ ಸಖಿ
ಹೊಸ ತಲೆಮಾರಿನವರ ನಾಡಿಮಿಡಿತ ಅರಿತಿರುವ ಸಂಗೀತ ನಿರ್ದೇಶಕ, ಗಾಯಕ ಅರ್ಜುನ್ ಜನ್ಯ ಕನ್ನಡದ ಹಲವಾರು ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿ ಜನಪ್ರಿಯತೆ ಪಡೆದವರು. ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿದ್ದು, ಇಷ್ಟ ಮಾತ್ರವಲ್ಲದೆ ಸಂಗೀತ ಕ್ಷೇತ್ರದಲ್ಲಿ ಹೊಸ ಪ್ರತಿಭೆಗಳಿಗೆ ಮಣೆ ಹಾಕಿ ಅವಕಾಶಗಳನ್ನು ನೀಡಿ ಸಾಕಷ್ಟು ಗಾಯಕರನ್ನು ಚಿತ್ರರಂಗಕ್ಕೆ ಪರಿಚಯಿಸಿದವರು ಕೂಡ.
ಈ ಬಾರಿ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾಗೆ ಟ್ರೆಂಡ್ಸ್ ಪ್ರಸ್ತುತ ‘ಅತ್ಯುತ್ತಮ ಸಂಗೀತ ನಿರ್ದೇಶನ’ ಪ್ರಶಸ್ತಿಯನ್ನು ಅವರು ತಮ್ಮದಾಗಿಸಿಕೊಂಡಿದ್ದಾರೆ. ಟಿಪಿಎಂಎಲ್ ಸಂಸ್ಥೆಯ ನಿರ್ದೇಶಕಿ ಸೌಭಾಗ್ಯಲಕ್ಷ್ಮಿ ಅವರು ಅರ್ಜುನ್ ಜನ್ಯ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅರ್ಜುನ್ ಅವರು, ‘ಇಡೀ ಸಿನಿಮಾ ತಂಡಕ್ಕೆ ಧನ್ಯವಾದ. ಇಲ್ಲಿ ನನ್ನ ಹಿರಿಮೆ ಏನೂ ಇಲ್ಲ. ನಿರ್ದೇಶಕರ ನಿರ್ದೇಶನದಲ್ಲಿ ನಮ್ಮ ಕೆಲಸ ನಡೆಯುತ್ತದೆ. ನಿರ್ದೇಶಕರು ಏನು ಮಾಡಿಸುತ್ತಾರೆ, ಏನು ಹೇಳುತ್ತಾರೆ, ಅವರ ಅಭಿರುಚಿ ಹೇಗಿರುತ್ತದೆ ಎಂಬುದರ ಮೇಲೆ ಸಂಗೀತ ಸೃಷ್ಟಿಯಾಗುತ್ತದೆ. ಹೀಗಾಗಿ ಈ ಪ್ರಶಸ್ತಿಯ ಗರಿಮೆ ಅವರಿಗೇ ಸಲ್ಲಬೇಕು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.