ADVERTISEMENT

ದೀಪಿಕಾ-ರಣಬೀರ್ ಚಿತ್ರದಲ್ಲಿ ಡ್ಯಾನ್ಸರ್ ಆಗಿದ್ದೆ: ಸಲ್ಮಾನ್‌ ಮೈದುನ ಆಯುಷ್ ಶರ್ಮಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಡಿಸೆಂಬರ್ 2021, 5:32 IST
Last Updated 6 ಡಿಸೆಂಬರ್ 2021, 5:32 IST
ಸಲ್ಮಾನ್ ಖಾನ್ ಅವರ ಮೈದುನ ಆಯುಷ್ ಶರ್ಮಾ
ಸಲ್ಮಾನ್ ಖಾನ್ ಅವರ ಮೈದುನ ಆಯುಷ್ ಶರ್ಮಾ   

ಬೆಂಗಳೂರು: ಅಂತಿಮ್ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ ಆಯುಷ್ ಶರ್ಮಾ ಅವರು ಸಲ್ಮಾನ್ ಖಾನ್ ಮೈದುನ ಎನ್ನುವುದು ಬಹುತೇಕರಿಗೆ ತಿಳಿದಿಲ್ಲ.

ಅಷ್ಟೇ ಅಲ್ಲದೆ, ಆಯುಷ್ ತಾನು ಈ ಮೊದಲು ದೀಪಿಕಾ ಪಡುಕೋಣೆ ಮತ್ತು ರಣಬೀರ್ ಕಪೂರ್ ಅಭಿನಯದ ದಿಲ್ಲಿವಾಲಿ ಗರ್ಲ್‌ಫ್ರೆಂಡ್ ಹಾಡಿನಲ್ಲಿ ನೃತ್ಯ ಮಾಡಿದ್ದೆ, ಸಹಕಲಾವಿದನಾಗಿ ಅಭಿನಯಿಸಿದ್ದೆ ಎಂದು ಹೇಳಿಕೊಂಡಿದ್ದಾರೆ.

ಯೇ ಜವಾನಿ ಹೇ ದೀವಾನಿ ಸಿನಿಮಾದಲ್ಲಿ ದೀಪಿಕಾ ಮತ್ತು ರಣವೀರ್ ನಟಿಸಿದ್ದಾರೆ. ಅದೇ ಚಿತ್ರದ ಹಾಡಿನ ದೃಶ್ಯವೊಂದರಲ್ಲಿ ಸಹಕಲಾವಿದನಾಗಿ ಆಯುಷ್ ಶರ್ಮಾ ಕಾಣಿಸಿಕೊಂಡಿದ್ದಾರೆ.

ADVERTISEMENT

ಮೆಹಬೂಬ್ ಸ್ಟುಡಿಯೋದಲ್ಲಿ ಸಿನಿಮಾ ಚಿತ್ರೀಕರಣ ನಡೆಯುತ್ತಿರುವಾಗ ವಿಷಯ ತಿಳಿದು, ಗೆಳೆಯನ ಮೂಲಕ ತಮಗೂ ಸಹನಟನಾಗಿ ಅವಕಾಶ ಕಲ್ಪಿಸುವಂತೆ ಕೋರಿಕೊಂಡಿದ್ದೆ ಎಂದು ಆಜ್‌ತಕ್‌ಗೆ ನೀಡಿರುವ ಸಂದರ್ಶನದಲ್ಲಿ ಆಯುಷ್ ಹೇಳಿದ್ದಾರೆ..

ಇತ್ತೀಚೆಗೆ ಆಯುಷ್ ಶರ್ಮಾ, ತಾನು ಸಲ್ಮಾನ್ ಖಾನ್ ಸಂಬಂಧಿ ಆಗಿರುವುದರಿಂದ ನನ್ನ ಮೇಲೂ ಸ್ವಜನಪಕ್ಷಪಾತ ಆರೋಪ ಬರಬಹುದು ಎಂದು ಹೇಳಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.