ADVERTISEMENT

ಕನ್ನಡಿಗ ಎ. ಹರ್ಷ ನಿರ್ದೆಶನದ ‘ಬಾಗಿ–4’ ಸಿನಿಮಾದ ಟ್ರೇಲರ್ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 12:46 IST
Last Updated 30 ಆಗಸ್ಟ್ 2025, 12:46 IST
   

ಕನ್ನಡಿಗ ಎ. ಹರ್ಷ ಅವರು ನಿರ್ದೆಶಿಸಿರುವ ಟೈಗರ್‌ಶ್ರಾಫ್ ಹಾಗೂ ಸಂಜಯ್ ದತ್ ನಟನೆಯ ‘ಬಾಗಿ–4 ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ.

ಸಿನಿಮಾದಲ್ಲಿ ಬಳಸುವ ಕೊಡಲಿ, ಮಚ್ಚು, ಬಂದೂಕುಗಳ ಮೇಲಿರುವ ರಕ್ತವೇ ಕಥೆಯನ್ನು ಹೇಳುವಂತಿದೆ.

ವರ್ಷದ ಅತ್ಯಂತ ರಕ್ತಸಿಕ್ತ ಪ್ರೇಮಕಥೆ ಸಿನಿಮಾ ಇದೇ ಇರಬಹುದುದೆಂದು ಸಿನಿಮಾ ತಂಡ ಅಭಿಪ್ರಾಯ ಪಟ್ಟಿದೆ.

ADVERTISEMENT

ಚಿತ್ರದಲ್ಲಿ ರೋನಿ ಪಾತ್ರದಲ್ಲಿ ಟೈಗರ್ ಶ್ರಾಫ್ ಗೆ ಭಯನಕ ಪ್ರತಿಸ್ಪರ್ಧಿಯಾಗಿ ಸಂಜಯ್ ದತ್ ನಟಿಸಿದ್ದರೇ, ಹರ್ನಾಜ್ ಕೌರ್ ಸಂಧು, ಸೋನಮ್ ಬಜ್ವಾ, ಮೊಹದ್ ತಾಲಿಬ್, ಮಹೇಶ್ ಠಾಕೂರ್, ಡಾಕ್ಟರ್ ಆನಂದ್ ನಲ್ನೀಶ್ ನೀಲ್ ಬಣ್ಣ ಹಚ್ಚಿದ್ದಾರೆ.

ಸಾಜಿದ್ ನಾಡಿಯಾಡ್ವಾಲಾ ನಿರ್ಮಾಣದ ಈ ಸಿನಿಮಾವನ್ನು ಎ. ಹರ್ಷ ನಿರ್ದೆಶಿಸಿದ್ದಾರೆ.

ಸದ್ಯ ಸಿನಿಮಾದ ಟ್ರೇಲರ್ ಯೂಟ್ಯೂಬ್‌ನಲ್ಲಿ 5 ಲಕ್ಷಕ್ಕೂ ಹೆಚ್ಚಿನ ವೀಕ್ಷಣೆ ಪಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.