ADVERTISEMENT

ಪ್ರಭಾಸ್‌ ಹುಟ್ಟುಹಬ್ಬದ ಸಂಭ್ರಮ: ಅಮೆರಿಕದಲ್ಲಿ ಮತ್ತೆ ತೆರೆ ಕಾಣಲಿದೆ ಬಾಹುಬಲಿ-2

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಅಕ್ಟೋಬರ್ 2020, 8:34 IST
Last Updated 20 ಅಕ್ಟೋಬರ್ 2020, 8:34 IST
ಬಾಹುಬಲಿ -2
ಬಾಹುಬಲಿ -2    

ಬೆಂಗಳೂರು: ಅಮೆರಿಕದಲ್ಲಿ 'ಬಾಹುಬಲಿ-2: ದಿ ಕನ್‌ಕ್ಲೂಷನ್' ಚಿತ್ರ ಅಮೆರಿಕದಲ್ಲಿ ಮತ್ತೆ ತೆರೆ ಕಾಣಲಿದೆ.ಪ್ರಭಾಸ್ ಹುಟ್ಟುಹಬ್ಬದ ಪ್ರಯುಕ್ತ ಅಮೆರಿಕದ 16 ನಗರಗಳಲ್ಲಿ ಬಾಹುಬಲಿ-2 ಪ್ರದರ್ಶನಗೊಳ್ಳಲಿದೆ.

ಅಕ್ಟೋಬರ್ 23ರಂದು ಪ್ರಭಾಸ್ ಹುಟ್ಟುಹಬ್ಬ. ಈಗಾಗಲೇ ಪ್ರಭಾಸ್ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹುಟ್ಟುಹಬ್ಬದ ಶುಭ ಹಾರೈಸಿ ಬಾಹುಬಲಿ-2 ಹ್ಯಾಷ್‌ಟ್ಯಾಗ್ ಟ್ರೆಂಡ್ ಮಾಡಿದ್ದಾರೆ.ಕೋವಿಡ್-19 ಸಾಂಕ್ರಾಮಿಕದ ಹೊತ್ತಲ್ಲಿ ಪ್ರಭಾಸ್ ಹುಟ್ಟುಹಬ್ಬವನ್ನು ಈ ರೀತಿ ಆಚರಿಸುತ್ತಿರುವುದು ಅಭಿಮಾನಿಗಳಲ್ಲಿ ಖುಷಿ ತಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT