ಶ್ರೀನಿವಾಸ ರಾಜು
ನಟ ಗಣೇಶ್ ಅಭಿನಯದ ‘ಕೃಷ್ಣಂ ಪ್ರಣಯ ಸಖಿ’ ವರ್ಷದ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿತು. ನಿರ್ದೇಶಕ ಶ್ರೀನಿವಾಸ ರಾಜು ಅವರು, ಟಿಪಿಎಂಎಲ್‌ನ ಸಿಒಒ ಕಿರಣ್ ಸುಂದರರಾಜನ್ ಮತ್ತು ಪ್ರಜಾವಾಣಿ ಕಾರ್ಯ ನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಅವರಿಂದ ಈ ಪ‍್ರಶಸ್ತಿ ಸ್ವೀಕರಿಸಿದರು.
ಈ ಸಿನಿಮಾ ಬಿಡುಗಡೆ ಮುನ್ನವೇ ತನ್ನ ಹಾಡುಗಳಿಂದಲೇ ಜನರನ್ನು ತಲುಪಿತ್ತು. ವಿ.ನಾಗೇಂದ್ರ ಪ್ರಸಾದ್ ಹಾಗೂ ಅರ್ಜುನ್ ಜನ್ಯ ಕಾಂಬಿನೇಷನ್‌ನಲ್ಲಿ ಮೂಡಿಬಂದಿದ್ದ ‘ದ್ವಾಪರ’ ಹಾಗೂ ‘ಚಿನ್ನಮ್ಮ’ ಹಾಡುಗಳು ಈ ಚಿತ್ರದ ಯಶಸ್ಸಿನ ಭಾಗವಾಗಿತ್ತು. ಗಣೇಶ್, ಮಾಳವಿಕ ನಾಯರ್, ಶರಣ್ಯ ಶೆಟ್ಟಿ, ಸಾಧು ಕೋಕಿಲ ಮುಖ್ಯಭೂಮಿಕೆಯಲ್ಲಿದ್ದ ಈ ಸಿನಿಮಾ ಗುಣಮಟ್ಟದಲ್ಲಿ ಹಾಗೂ ರಿಚ್‌ನೆಸ್‌ನಲ್ಲಿ ಉತ್ಕೃಷ್ಟವಾಗಿ ಮೂಡಿಬಂದಿತ್ತು. ಗಣೇಶ್ ಹಾಗೂ ಸಾಧು ಕೋಕಿಲ ಅವರ ಕಾಮಿಡಿ ಟೈಮಿಂಗ್ ಈ ಸಿನಿಮಾದ ಪ್ರಮುಖ ಅಂಶ. ನಿರ್ದೇಶನ ಹಾಗೂ ಗಣೇಶ್ ಅವರ ಸಿನಿಮಾಗಳಲ್ಲಿ ಕಾಣಸಿಗುವ ಫ್ಯಾಮಿಲಿ ಎಂಟರ್‌ಟೈನರ್ ಅಂಶಗಳು ಸಿನಿಮಾದ ಯಶಸ್ಸಿಗೆ ಕಾರಣವಾದವು.
ನಮ್ಮ ಚಿತ್ರ ಈ ಪ್ರಶಸ್ತಿಯೂ ಸೇರಿದಂತೆ ಒಟ್ಟು ಐದು ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಒಂದು ರೀತಿ ಫಸ್ಟ್ ರ್‍ಯಾಂಕ್ ವಿದ್ಯಾರ್ಥಿಯಂತೆ. ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ, ಅರ್ಜುನ್ ಜನ್ಯ ಸಂಗೀತ ಎಲ್ಲವೂ ಯಶಸ್ಸಿಗೆ ಕಾರಣ. ಇದರಲ್ಲಿ ನನ್ನ ಕೆಲಸ ಬಹಳ ಕಡಿಮೆ. ಚಿತ್ರಕ್ಕಾಗಿ ಕೆಲಸ ಮಾಡಿದ ಎಲ್ಲ ತಂತ್ರಜ್ಞರಿಗೆ ಧನ್ಯವಾದಗಳು. ಈ ಚಿತ್ರ ಪ್ರಾರಂಭಿಸುವಾಗಲೇ ಕುಟುಂಬದವರೆಲ್ಲ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಬೇಕೆಂಬ ಪರಿಕಲ್ಪನೆಯೊಂದಿಗೆ ಪ್ರಾರಂಭಿಸಿದ್ದು. ಕಥೆ, ಸಂಗೀತ, ಛಾಯಾಚಿತ್ರಗ್ರಹಣ ಎಲ್ಲವೂ ಅದೇ ರೀತಿ. ಜನ ಬಂದು ಚಿತ್ರ ನೋಡಿ ಹರಸಿದ್ದಾರೆ. ಪ್ರಶಸ್ತಿಗಾಗಿ ಪ್ರಜಾವಾಣಿ ಬಳಗಕ್ಕೆ ಧನ್ಯವಾದಗಳುಶ್ರೀನಿವಾಸ ರಾಜು,
ಜನಮೆಚ್ಚಿದ ಚಿತ್ರಗೀತೆ: ದ್ವಾಪರ ಚಿತ್ರ: ಕೃಷ್ಣಂ ಪ್ರಣಯ ಸಖಿ
ಶ್ರೀನಿವಾಸ ರಾಜು ನಿರ್ದೇಶನದ, ಗಣೇಶ್ ನಟನೆಯ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾ ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ದ ಮೂರನೇ ಆವೃತ್ತಿಯಲ್ಲಿ ಐದು ಪ್ರಶಸ್ತಿಗಳನ್ನು ಬಾಚಿಕೊಂಡಿತು. ವಿಶೇಷವೆಂದರೆ ಈ ಪೈಕಿ ನಾಲ್ಕು ಪ್ರಶಸ್ತಿಗಳು ಆ ಸಿನಿಮಾದ ‘ದ್ವಾಪರ ದಾಟುತ..’ ಹಾಡಿಗೆ ಲಭಿಸಿತು. ‘ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್’ ಪ್ರಸ್ತುತ ಜನಮೆಚ್ಚಿದ ಚಿತ್ರಗೀತೆ ಪ್ರಶಸ್ತಿಯನ್ನೂ ಈ ಹಾಡು ಬಾಚಿಕೊಂಡಿತು. ಇದೇ ಹಾಡಿಗೆ ‘ಅತ್ಯುತ್ತಮ ಹಿನ್ನೆಲೆ ಗಾಯಕ’ ಪ್ರಶಸ್ತಿಯನ್ನು ಜಸ್ಕರಣ್ ಸಿಂಗ್ ಪಡೆದರೆ, ಸಾಹಿತ್ಯಕ್ಕೆ ‘ಅತ್ಯುತ್ತಮ ಗೀತ ಸಾಹಿತ್ಯ’ ಪ್ರಶಸ್ತಿಯನ್ನು ವಿ.ನಾಗೇಂದ್ರ ಪ್ರಸಾದ್ ಪಡೆದರು. ಸಂಗೀತ ನಿರ್ದೇಶನಕ್ಕೆ ಅರ್ಜುನ್ ಜನ್ಯ ‘ಅತ್ಯುತ್ತಮ ಸಂಗೀತ ನಿರ್ದೇಶನ’ ಪ್ರಶಸ್ತಿ ಪಡೆದರು. ಶೇಖರ್ ಮಾಸ್ಟರ್ ‘ಅತ್ಯುತ್ತಮ ನೃತ್ಯ ನಿರ್ದೇಶನ’ ಪ್ರಶಸ್ತಿ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.