ಗಿಲ್ಲಿ ನಟ
ಕೃಪೆ: ಎಕ್ಸ್ ಖಾತೆ
ಕನ್ನಡದ ಅತಿದೊಡ್ಡ ರಿಯಾಲಿಟಿ ಶೋಗಳಲ್ಲಿ ಒಂದಾದ ಬಿಗ್‌ಬಾಸ್ - 12ನೇ ಆವೃತ್ತಿಯ ಗೆಲುವಿನ ಕಿರೀಟವನ್ನು ಗಿಲ್ಲಿ ನಟ ಅವರು ಮುಡಿಗೇರಿಸಿಕೊಂಡಿದ್ದಾರೆ.
ಗಿಲ್ಲಿ ಅವರು ಬಿಗ್‌ಬಾಸ್‌ಗೆ ಹೋದಾಗಿನಿಂದಲೂ ಅವರನ್ನು ಗೆಲ್ಲಿಸಲು ಅಭಿಮಾನಿಗಳು ಎಲ್ಲೆಡೆ ಪ್ರಚಾರ ಮಾಡುತ್ತಲೇ ಇದ್ದರು. ಅಲ್ಲದೇ, ಸಾಮಾಜಿಕ ಮಾಧ್ಯಮದಲ್ಲೂ ಟ್ರೆಂಡ್ ಸೃಷ್ಟಿಸಿದ್ದರು.
ಬಿಗ್‌ಬಾಸ್ ಫೈನಲ್ ವೀಕ್ಷಿಸಲು ಸಾವಿರಾರು ಅಭಿಮಾನಿಗಳು ಜಾಲಿವುಡ್ ಸ್ಟುಡಿಯೊ ಎದುರು ಜಮಾಯಿಸಿದ್ದರು. ಬಿಗ್‌ಬಾಸ್ ವೇದಿಕೆ ಮೇಲೆ ನಟ, ನಿರೂಪಕ ಕಿಚ್ಚ ಸುದೀಪ್ ಅವರು ವಿನ್ನರ್ ಗಿಲ್ಲಿ ಎಂದು ಘೋಷಣೆ ಮಾಡುತ್ತಿದ್ದಂತೆ ಅಭಿಮಾನಿಗಳು ಜಾಲಿವುಡ್ ಸ್ಟುಡಿಯೋ ಎದುರು ಪಟಾಕಿ ಸಿಡಿಸಿ, ಗಿಲ್ಲಿ ಭಾವಚಿತ್ರ ಹಿಡಿದು ಸಂಭ್ರಮಿಸಿದ್ದಾರೆ.
ಗಿಲ್ಲಿ ಅವರಿಗೆ ಅಂತಿಮ ಸುತ್ತಿನಲ್ಲಿ ರಕ್ಷಿತಾ ಶೆಟ್ಟಿ ಪೈಪೋಟಿ ನೀಡಿದ್ದರು.
ಜಾಲಿವುಡ್ ಸ್ಟುಡಿಯೊ, ಗಿಲ್ಲಿ ಹುಟ್ಟೂರಾದ ಮಂಡ್ಯದ ದಡದಪುರ ಸೇರಿದಂತೆ ರಾಜ್ಯದ ಅನೇಕ ಕಡೆಗಳಲ್ಲಿ ಗಿಲ್ಲಿ ಗೆಲುವನ್ನು ಅಭಿಮಾನಿಗಳು ಸಂಭ್ರಮಿಸಿದ್ದಾರೆ.
ಗಿಲ್ಲಿ ಭಾವಚಿತ್ರದ ಪೋಸ್ಟರ್ ಹಿಡಿದು ಅಭಿಮಾನಿಗಳು ಕುಣಿದಾಡಿದ್ದಾರೆ. ಇದರ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಒಳ್ಳೆಯತನ ಗೆಲ್ಲಲೇಬೇಕು, ಬಡವರ ಮಕ್ಕಳು ಬೆಳೆಯಬೇಕು ಎನ್ನುವ ಮಾತುಗಳು ಅಭಿಮಾನಿಗಳ ಬಾಯಲ್ಲಿ ಕೇಳಿಬಂದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.