
ಗಾಯಕಿ ಸಾನ್ವಿ ಸುದೀಪ್
ಬೆಂಗಳೂರು: ಇತ್ತೀಚೆಗೆ ಬಿಡುಗಡೆ ಆಗಿರುವ ಮಾರ್ಕ್ ಹಾಗೂ 45 ಸಿನಿಮಾಗಳು ಸದ್ದು ಮಾಡುತ್ತಿವೆ. ಅದರಲ್ಲೂ ಮಾರ್ಕ್ ಸಿನಿಮಾ ಸಿನಿಮಾದಲ್ಲಿನ ವಿಷಯಗಳಿಗಿಂತೂ ಇತರ ವಿಷಯಗಳಿಗೆ ಹೆಚ್ಚು ಚರ್ಚೆಯಾಗಿ ಕಡೆಗೆ ಸುದೀಪ್-ದರ್ಶನ್ ಅಭಿಮಾನಿಗಳ ಸೋಶಿಯಲ್ ವಾರ್ ಆಗಿ ಬದಲಾಗಲು ಕಾರಣವಾಗಿದೆ ಎನ್ನಲಾಗಿದೆ.
ಏನೇ ಒಂದು ವಿಷಯ ಚರ್ಚೆಯಾದರೂ ಸೋಶಿಯಲ್ ಮೀಡಿಯಾದಲ್ಲಿ ಪರ-ವಿರೋಧ ಕಮೆಂಟಿಸುವವರು ಎದ್ದು ಕೂರುತ್ತಾರೆ. ಅದರಲ್ಲೂ ಕೆಲ ವಿಕೃತ ಮನಸ್ಸುಗಳು ಮನಸ್ಸಿನ ಕೊಳಕನ್ನು ಅಲ್ಲಿ ಕಾರಿಕೊಳ್ಳುವುದನ್ನು ಇತ್ತೀಚೆಗೆ ಹೆಚ್ಚು ಕಾಣುತ್ತೇವೆ.
ಇಂತಹ ವಿಕೃತ ಮನಸ್ಸುಗಳಿಗೆ ಮಾರ್ಕ್ ಸಿನಿಮಾ ಹಿನ್ನೆಲೆಯ ವಿವಾದದಲ್ಲಿಯೇ ನಟ ಸುದೀಪ್ ಅವರ ಮಗಳು, ಗಾಯಕಿ ಸಾನ್ವಿ ಸುದೀಪ್ ಅವರು ಆಹಾರವಾಗಿದ್ದಾರೆ.
ಸಾನ್ವಿ ಸುದೀಪ್ ಅವರ ಬಗ್ಗೆ ಆನ್‌ಲೈನ್‌ನಲ್ಲಿ ಕೆಲವರು ವಿಪರೀತವಾಗಿ ಬಾಡಿ ಶೇಮಿಂಗ್ ಬಗ್ಗೆ ಕಮೆಂಟ್‌ಗಳನ್ನು ಕೆಟ್ಟ ಕಮೆಂಟ್‌ಗಳನ್ನು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೇ ಅವರನ್ನು ಬಾಡಿ ಶೇಮಿಂಗ್ ವಿಚಾರವಾಗಿ ಟ್ರೋಲ್ ಕೂಡ ಮಾಡುತ್ತಿದ್ದಾರೆ.
ಇದಕ್ಕೆ ತಾಳ್ಮೆ ಕಳೆದುಕೊಳ್ಳದೇ ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡಿರುವ ಸಾನ್ವಿ ಸುದೀಪ್ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ʼನನ್ನ ದೇಹ ಚರ್ಚೆ ಮಾಡೋ ವಿಷಯ ಅಲ್ರಪ್ಪಾ, ಹಾಗೇನಾದರೂ ನನ್ನ ದೇಹದ ಬಗ್ಗೆ ಚರ್ಚೆ ಮಾಡೋದು ಆದ್ರೆ ನಾನೇ ನಿಮ್ಮನ್ನು ಕೇಳುತ್ತೇನೆ. ಆಗ ಹೇಳಿʼ ಎಂದು ನಗುವ ಎಮೋಜಿ ಹಾಕಿದ್ದಾರೆ. ಈ ಮೂಲಕ ಅವರು ಟ್ರೋಲರ್‌ಗಳಿಗೆ ಹಾಗೂ ಕೆಟ್ಟ ಕಮೆಂಟ್‌ಗಳನ್ನು ಮಾಡುವವರಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಮಸ್ತ್ ಮಲೈಕಾ ಮೂಲಕ ಸಾನ್ವಿ ಮಿಂಚು
ಮಾರ್ಕ್ ಸಿನಿಮಾದ ಮಸ್ತ್ ಮಲೈಕಾ ಸಾಂಗ್‌ಗೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಅದರಲ್ಲಿಯೂ ಸಾನ್ವಿ ಸುದೀಪ್ ಕಂಠಕ್ಕೆ ಸಂಗೀತ ಪ್ರಿಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಮಸ್ತ್ ಮಲೈಕಾ ಹಾಡಿಗೆ ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಧ್ವನಿ ನೀಡಿದ್ದಾರೆ. ಮಗಳ ಕಂಠಕ್ಕೆ ಕಿಚ್ಚ ಬೊಂಬಾಟ್ ಸ್ಟೆಪ್ಸ್ ಹಾಕಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.