ADVERTISEMENT

ಬಾಲಿವುಡ್ ಹಿರಿಯ ನಟಿ ಕಾಮಿನಿ ಕೌಶಲ್ ನಿಧನ

ಪಿಟಿಐ
Published 14 ನವೆಂಬರ್ 2025, 9:46 IST
Last Updated 14 ನವೆಂಬರ್ 2025, 9:46 IST

ಚಿತ್ರ ಕೃಪೆ: Mimansa Shekhar

ಚಿತ್ರ ಕೃಪೆ: Mimansa Shekhar

ಮುಂಬೈ: ಬಾಲಿವುಡ್ ಹಿರಿಯ ನಟಿ ಕಾಮಿನಿ ಕೌಶಲ್ (98) ಮುಂಬೈನ ಮನೆಯಲ್ಲಿ ನಿನ್ನೆ(ಗುರುವಾರ) ನಿಧನರಾಗಿದ್ದಾರೆ ಎಂದು ಅವರ ಕುಟುಂಬದ ಆಪ್ತ ಸ್ನೇಹಿತ ಸಜನ್ ನರೈನ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಕಾಮಿನಿ ಕೌಶಲ್ ಅವರು 1946 ರಲ್ಲಿ ತೆರೆ ಕಂಡ ‘ನೀಚಾ ನಗರ್’ ಎಂಬ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಇವರು 76 ವರ್ಷಗಳ ಕಾಲ ಸಿನಿಮಾ ರಂಗದಲ್ಲಿ ಕೆಲಸ ಮಾಡಿದ್ದಾರೆ. ಅಷ್ಟೆ ಅಲ್ಲದೆ ಆ ಕಾಲದಲ್ಲಿ ಹೆಚ್ಚಿನ ಸಂಭಾವನೆ ಪಡೆದಿದ್ದ ನಟಿ ಎಂದು ಪಿಟಿಐ ವರದಿ ಮಾಡಿದೆ.

ADVERTISEMENT

ನಟಿ ಕಾಮಿನಿ ಕೌಶಲ್ ಅವರು ನಟ ದಿಲೀಪ್ ಕುಮಾರ್, ದೇವ್ ಆನಂದ್, ರಾಜ್ ಕಪೂರ್ ಜೊತೆ ನಟಿಸಿದ್ದರು. ಅವರು ಕೊನೆಯದಾಗಿ 2022ರಲ್ಲಿ ಬಿಡುಗಡೆಯಾದ ಆಮಿರ್ ಖಾನ್ ನಟನೆಯ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾದಲ್ಲಿ ನಟಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.