ADVERTISEMENT

ರಣಬೀರ್ ಕಪೂರ್– ಆಲಿಯಾ ಭಟ್ ಮದುವೆ ದಿನಾಂಕ ಬಹಿರಂಗ: ಪೂರ್ಣ ಮಾಹಿತಿ ಇಲ್ಲಿದೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಏಪ್ರಿಲ್ 2022, 11:32 IST
Last Updated 8 ಏಪ್ರಿಲ್ 2022, 11:32 IST
ಆಲಿಯಾ ಭಟ್ -ರಣಬೀರ್ ಕಪೂರ್
ಆಲಿಯಾ ಭಟ್ -ರಣಬೀರ್ ಕಪೂರ್    

ಮುಂಬೈ: ಬಾಲಿವುಡ್‌ನ ಕ್ಯೂಟ್ ಜೋಡಿ ಎಂದೇ ಹೆಸರಾಗಿರುವ ಆಲಿಯಾ ಭಟ್‌ ಮತ್ತು ರಣಬೀರ್ ಕಪೂರ್ ಸಪ್ತಪದಿ ತುಳಿಯಲು ನಿಶ್ಚಯಿಸಿದ್ದು, ಇದೇ ತಿಂಗಳಲ್ಲಿ ಮದುವೆಯಾಗಲಿದ್ದಾರೆ.

ಈ ಜೋಡಿ ಮದುವೆ ವಿಚಾರವನ್ನು ಖಚಿತಪಡಿಸಿದ್ದು, ಸಮಾರಂಭದ ಪೂರ್ವ ತಯಾರಿಗಳು ಈಗಾಗಲೇ ಆರಂಭವಾಗಿವೆ ಎಂದು ವರದಿಯಾಗಿದೆ.

ಮದುವೆಗೆ ಎರಡೂ ಕುಟುಂಬದ ಹಿರಿಯರು ಒಪ್ಪಿಗೆ ಸೂಚಿಸಿದ್ದಾರೆ. ಏ.13ರಂದು ಮೆಹಂದಿ ಶಾಸ್ತ್ರ ನಡೆಯಲಿದೆ. ಏ.14ರಂದು ಹಳದಿ ಮತ್ತು ಸಂಗೀತ್ ಕಾರ್ಯಕ್ರಮ ನೆರವೇರಲಿದೆ. ಏ.15ರಂದು ಅದ್ದೂರಿಯಾಗಿ ಮದುವೆ ಸಮಾರಂಭ ನಡೆಯಲಿದೆ. ಈ ಸಮಾರಂಭದಲ್ಲಿ ಎರಡೂ ಕುಟುಂಬಗಳ ಆಪ್ತರು ಮತ್ತು ಸ್ನೇಹಿತರಷ್ಟೇ ಭಾಗವಹಿಸಲಿದ್ದಾರೆ.

ಏ.16ರಂದು ಸಂಜೆ ಔತಣಕೂಟ ಏರ್ಪಡಿಸಿದ್ದು, ಸಿನಿಮಾರಂಗದ ಗಣ್ಯರು ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಓದಿ...ವಿಡಿಯೊ: ಅಂಗವಿಕಲ ಮುಸ್ಲಿಂ ಸಹಪಾಠಿಗೆ ನೆರವಾದ ಹಿಂದೂ ಸ್ನೇಹಿತೆಯರು, ಮೆಚ್ಚುಗೆ

ಕಪೂರ್‌ ಕುಟುಂಬದ ರಣಬೀರ್‌ ಹಾಗೂ ಖ್ಯಾತ ಬಾಲಿವುಡ್‌ ನಿರ್ದೇಶಕ ಮಹೇಶ್‌ ಭಟ್‌ ಮಗಳು ಆಲಿಯಾ ಭಟ್‌ ಕಳೆದ ಎರಡು ವರ್ಷಗಳಿಂದ ಡೇಟಿಂಗ್‌ ಮಾಡುತ್ತಿದ್ದಾರೆ. ಒಂದು ವರ್ಷದಿಂದ ಈ ಜೋಡಿ ವಿವಾಹವಾಗುವ ಸುದ್ದಿಗಳು ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದವು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.