ADVERTISEMENT

ಶಾರುಕ್‌ ಖಾನ್‌ ಹುಟ್ಟುಹಬ್ಬ: ಬಾಲಿವುಡ್‌ ಬಾದ್‌ ಶಾ ಮನೆಯೆದರು ಅಭಿಮಾನಿಗಳ ದಂಡು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ನವೆಂಬರ್ 2023, 2:58 IST
Last Updated 2 ನವೆಂಬರ್ 2023, 2:58 IST
ಬಾಲಿವುಡ್‌ ನಟ ಶಾರುಕ್‌ ಖಾನ್‌
ಬಾಲಿವುಡ್‌ ನಟ ಶಾರುಕ್‌ ಖಾನ್‌   

ಮುಂಬೈ: ಬಾಲಿವುಡ್‌ ಬಾದ್‌ ಶಾ ಶಾರುಕ್‌ ಖಾನ್‌ಗೆ 58ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ಮಧ್ಯರಾತ್ರಿ 12 ಗಂಟೆಗೆ ಅಭಿಮಾನಿಗಳು ಶಾರುಕ್‌ ಮನೆ ಎದುರು ಜಮಾಯಿಸಿ ಶುಭಕೋರಿದರು.

ಕಪ್ಪು ಬಣ್ಣದ ಉಡುಪು ಧರಿಸಿ ಬಾಲ್ಕನಿಯಲ್ಲಿ ಬಂದು ನಿಂತು, ಮನೆ ಮುಂದೆ ಅಭಿಮಾನಿಗಳ ದಂಡು ಕಂಡು ಶಾರುಕ್‌ ಕೈಬೀಸಿ ಹರ್ಷ ವ್ಯಕ್ತಪಡಿಸಿದ್ದಾರೆ.

ವಿವಿಧ ರಾಜ್ಯಗಳಿಂದ ಮುಂಬೈಗೆ ಆಗಮಿಸಿದ ಅಭಿಮಾನಿಗಳು ನೆಚ್ಚಿನ ನಟನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.  ಅನೇಕರು ಉಡುಗೊರೆ, ಕೇಕ್‌, ಪೋಸ್ಟರ್‌, ಸಿಹಿತಿಂಡಿ, ಹೂಗುಚ್ಛಗಳನ್ನು ನೀಡಿದ್ದಾರೆ.

ADVERTISEMENT

ಈ ಬಗ್ಗೆ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡ ಶಾರುಕ್‌. ‘ಹುಟ್ಟುಹಬ್ಬದ ಆಚರಣೆಯನ್ನು ನಂಬಲಸಾಧ್ಯವಾಗಿದೆ. ನಾನು ಕೇವಲ ನಟ. ನಾನು ನಿಮ್ಮನ್ನು ಸ್ವಲ್ಪಮಟ್ಟಿಗೆ ಮನರಂಜಿಸುತ್ತೇನೆ ಎನ್ನುವುದೇ ಖುಷಿಯ ಸಂಗತಿ. ನಿಮ್ಮ ಪ್ರೀತಿಯ ಕನಸಿನಲ್ಲಿ ಬದುಕುತ್ತೇನೆ. ನಿಮ್ಮೆಲ್ಲರನ್ನು ರಂಜಿಸಲು ನನಗೆ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ. 

ಶಾರುಕ್‌ ಹುಟ್ಟುಹಬ್ಬದ ಹಿನ್ನೆಲೆ ಜವಾನ್‌ ಚಿತ್ರವನ್ನು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಮಾಡಲಾಗಿದೆ.

ಶಾರುಕ್‌ ಅವರ ಡಂಕಿ, ಟೈಗರ್ 3, ದಿ ಆರ್ಚೀಸ್ ಚಿತ್ರಗಳು ತಯಾರಾಗುತ್ತಿದ್ದು, ಇನ್ನಷ್ಟೇ ಬಿಡುಗಡೆಯಾಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.