
ಬಾರ್ಡರ್ 2
ಚಿತ್ರ ಕೃಪೆ:T Series Films
ಬಾಲಿವುಡ್ ನಟ ಸನ್ನಿ ಡಿಯೋಲ್ ನಟನೆಯ ‘ಬಾರ್ಡರ್ 2’ ಸಿನಿಮಾ ಬಿಡುಗಡೆಯಾದ ಮೂರೇ ದಿನಕ್ಕೆ ಬಾಕ್ಸ್ ಆಫೀಸ್‌ನಲ್ಲಿ ₹100 ಕೋಟಿಗೂ ಅಧಿಕ ಗಳಿಕೆ ಮಾಡಿರುವುದಾಗಿ ಚಿತ್ರತಂಡ ತಿಳಿಸಿದೆ.
ಅನುರಾಗ್ ಸಿಂಗ್ ನಿರ್ದೇಶನದ ‘ಬಾರ್ಡರ್ 2 ಸಿನಿಮಾವು ಜನವರಿ 23ರಂದು ಬಿಡುಗಡೆಯಾಗಿತ್ತು. ಚಿತ್ರ ಬಿಡುಗಡೆಯಾದ ಮೊದಲ ದಿನ ₹32.10 ಕೋಟಿ, ಎರಡನೇ ದಿನ ₹40.59 ಕೋಟಿ ಹಾಗೂ ಮೂರನೇ ದಿನ ₹57.20 ಕೋಟಿ ಗಳಿಸುವ ಮೂಲಕ ಒಟ್ಟು ಸಂಗ್ರಹ ₹129.89 ಕೋಟಿಯಾಗಿದೆ ಎಂದು ಚಿತ್ರತಂಡ ತಿಳಿಸಿದೆ.
‘ಬಾರ್ಡರ್’ ಸಿನಿಮಾದ ಮುಂದುವರೆದ ಭಾಗವಾದ ‘ಬಾರ್ಡರ್ 2‘ ಸಿನಿಮಾವನ್ನು ಟಿ-ಸೀರೀಸ್ ಮತ್ತು ಜೆಪಿ ಫಿಲ್ಮ್ಸ್ ನಿರ್ಮಾಣ ಮಾಡಿವೆ. ಸಿನಿಮಾದಲ್ಲಿ ವರುಣ್ ಧವನ್, ದಿಲ್ಜಿತ್ ದೋಸಾಂಜ್, ಅಹಾನ್ ಶೆಟ್ಟಿ, ಮೋನಾ ಸಿಂಗ್, ಸೋನಮ್ ಬಜ್ವಾ, ಅನ್ಯಾ ಸಿಂಗ್ ಮತ್ತು ಮೇಧಾ ರಾಣಾ ನಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.