ADVERTISEMENT

‘ಬಾರ್ಡರ್ 2’ ಚಿತ್ರೀಕರಣ ಮುಕ್ತಾಯ: ಮರೆಯಲಾರದ ಅನುಭವ ಎಂದ ನಟ ಅಹಾನ್ ಶೆಟ್ಟಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಡಿಸೆಂಬರ್ 2025, 10:54 IST
Last Updated 4 ಡಿಸೆಂಬರ್ 2025, 10:54 IST
   

‘ಬಾರ್ಡರ್ 2’ ಚಿತ್ರದ ಚಿತ್ರೀಕರಣ ಮುಗಿದಿದೆ. ಈ  ಕುರಿತು ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರ ಪುತ್ರ ಅಹಾನ್ ಶೆಟ್ಟಿ ಅವರು, ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಚಿತ್ರಗಳನ್ನು ಹಂಚಿಕೊಂಡು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅಹಾನ್ ಶೆಟ್ಟಿ ಅವರು, ‘ನೈಜ್ಯ ಕಥೆ ಹೊಂದಿರುವ ‘ಬಾರ್ಡರ್ 2’  ಚಿತ್ರದಲ್ಲಿ ದೇಶಭಕ್ತಿ, ಸೈನಿಕರ ಧೈರ್ಯವನ್ನು ಕಾಣಬಹುದು. ಸಿನಿಮಾ ಮುಗಿಯುತ್ತಿದ್ದಂತೆ ಸೆಟ್‌ನಿಂದ ಹೊರ ಹೋಗಲು ಮನಸ್ಸಿಗೆ ಬೇಸರ ಆಗುತ್ತಿದೆ. ಈ ಚಿತ್ರ ನನಗೆ ಮರೆಯಲಾಗದ ಕ್ಷಣಗಳನ್ನು ನೀಡಿದೆ. ನಮ್ಮ ಸಶಸ್ತ್ರ ಪಡೆಗಳಿಗೆ, ಚಿತ್ರತಂಡಕ್ಕೆ ನಾನು  ಕೃತಜ್ಞತೆ ಸಲ್ಲಿಸುತ್ತೇನೆ' ಎಂದು ಬರೆದುಕೊಂಡಿದ್ದಾರೆ.

ಈ ಚಿತ್ರವು  2026ರ ಜನವರಿ 23 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ADVERTISEMENT

1997ರಲ್ಲಿ ತೆರೆಕಂಡ ಅನುರಾಗ್ ಸಿಂಗ್ ನಿರ್ದೇಶನದ  ‘ಬಾರ್ಡರ್’ ಚಿತ್ರದ ಮುಂದುವರಿದ ಭಾಗ ‘ಬಾರ್ಡರ್ 2’ ಆಗಿದ್ದು ಇದನ್ನು ಜೆ. ಪಿ. ದತ್ತಾ ಅವರು ನಿರ್ದೇಶಿಸಿದ್ದಾರೆ. 

‘ಬಾರ್ಡರ್ 2’  ಚಿತ್ರದಲ್ಲಿ  ಸನ್ನಿ ಡಿಯೋಲ್, ಸುನೀಲ್ ಶೆಟ್ಟಿ, ಜಾಕಿ ಶ್ರಾಫ್ ಮತ್ತು ಅಕ್ಷಯ್ ಖನ್ನಾ, ವರುಣ್ ಧವನ್, ದಿಲ್ಜಿತ್ ದೋಸಾಂಜ್ ಮತ್ತು ಸೋನಮ್ ಬಾಜ್ವಾ  ಅವರು ನಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.