ನವದೆಹಲಿ: ಬಾಲ್ಯದ ಕನಸನ್ನು ನನಸಾಗಿಸಲು ಪ್ರೇಕ್ಷಕರಿಂದ ಸಿಗುವ ಪ್ರೀತಿಯೇ ಕಾರಣವಾಯಿತು ಎಂದು ಬಾಲಿವುಡ್ ನಟಿ ಶ್ರದ್ಧಾ ಕಪೂರ್ ತಿಳಿಸಿದ್ದಾರೆ.
ಪ್ರೇಕ್ಷಕರು ತೋರಿದ ಪ್ರೀತಿಯಿಂದಾಗಿ ನನ್ನ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ ಎಂಬ ಅರಿವಾಯಿತು. ನಾನು ಜನರಿಗೆ ಮನರಂಜನೆ ನೀಡುವುದಕ್ಕಾಗಿಯೇ ಇಲ್ಲಿದ್ದೇನೆ. ಅದನ್ನು ಮುಂದುವರಿಸಬೇಕು. ಅದಕ್ಕೆ ಅವಕಾಶ ಕಲ್ಪಿಸುವ ಸಿನಿಮಾಗಳಲ್ಲಿ ಅಭಿನಯಿಸಬೇಕು ಎಂದು ನಿರ್ಧರಿಸಿದೆ ಎಂದಿದ್ದಾರೆ.
ನಾನು ಅಂತಹ ಜವಾಬ್ದಾರಿಯನ್ನು ಹೊತ್ತುಕೊಂಡೆ. ಪ್ರೇಕ್ಷಕರಿಂದ ದೊರೆತ ಶಕ್ತಿ ಮತ್ತು ಪ್ರೋತ್ಸಾಹ ನನ್ನನ್ನು ಪ್ರೇರೇಪಿಸಿತು. ನನ್ನ ಬಾಲ್ಯದ ಕನಸು ನನಸಾಗಲು ಅವರೇ ಕಾರಣ. ನಟನೆಯು ಒತ್ತಡ ಮತ್ತು ಜವಾಬ್ದಾರಿಯಿಂದ ಕೂಡಿದೆ ಎಂದು ಹೇಳಿಕೊಂಡಿದ್ದಾರೆ.
ಶ್ರದ್ಧಾ 2018 ರ ಕಾಮಿಡಿ ಹಾರರ್ ಚಿತ್ರ 'ಸ್ಟ್ರೀ'ನ ಭಾಗ-2ರಲ್ಲಿ ನಟಿಸಲಿದ್ದಾರೆ. ಇತ್ತೀಚಿಗೆ ಶ್ರದ್ಧಾ 'ತು ಜೂಟಿ ಮೈನ್ ಮಕ್ಕರ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.