ADVERTISEMENT

JC Movie: ಜೈಲಿನ ಡಾರ್ಕ್‌ನೆಸ್ ಪಯಣದ ಬಗ್ಗೆ ಡಾಲಿ ಧನಂಜಯ್ ಮಾತು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಜನವರಿ 2026, 9:33 IST
Last Updated 28 ಜನವರಿ 2026, 9:33 IST
   

'ಡಾಲಿ ಪಿಕ್ಚರ್ಸ್' ನಿರ್ಮಾಣದ 'ಜೆಸಿ' (ಜುಡಿಷಿಯಲ್ ಕಸ್ಟಡಿ) ಚಿತ್ರದ ಟ್ರೇಲ‌ರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಈ ಕುರಿತು ಚಿತ್ರದ ನಿರ್ಮಾಪಕ ಡಾಲಿ ಧನಂಜಯ್ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

‘ಚಿತ್ರದ ಮೂಲಕ ಏನಾದರೂ ಸಂದೇಶ ಕೊಡಬೇಕು ಎನ್ನುವುದು ನನ್ನ ಗುರಿ. ನನಗೆ ಇಷ್ಟವಾದ ಚಿತ್ರಕಥೆ ಇದಾಗಿದೆ. ಜೈಲು ಆಧಾರಿತ ಸಿನಿಮಾ ಮಾಡುವಾಗ ಸತ್ಯತೆ ಬಗ್ಗೆ ತಿಳಿದಿರಬೇಕು. ನಿರ್ದೇಶಕರು ಈ ಚಿತ್ರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಮಾಹಿತಿ ಕಲೆ ಹಾಕಿದ್ದಾರೆ. ಪ್ರೇಕ್ಷಕರಿಗೂ ಈ ಚಿತ್ರ ಇಷ್ಟ ಆಗುತ್ತದೆ’ ಎಂದು ಹೇಳಿಕೊಂಡಿದ್ದಾರೆ.

ಚೇತನ್ ಜೈರಾಮ್ ನಿರ್ದೇಶನದ ಈ ಚಿತ್ರದಲ್ಲಿ ನಟ ಥ್ರಿಲ್ಲರ್ ಮಂಜು, ರಂಗಾಯಣ ರಘು, ನಟಿ ಸ್ವಾತಿ, ಬಿಗ್‌ಬಾಸ್ ಮಾಜಿ ಸ್ಪರ್ಧಿ ಹಂಸ ಹಾಗೂ ಸೂರ್ಯ ಪ್ರಖ್ಯಾತ್‌, ಭಾವನಾ ರೆಡ್ಡಿ ನಟಿಸಿದ್ದಾರೆ.

'ಜೆಸಿ' ಚಿತ್ರವು ಫೆ.6ರಂದು ತೆರೆಗೆ ಬರಲಿದೆ.

ಯಾವುದೋ ಕಾರಣಕ್ಕೆ ಜೈಲು ಸೇರುವ ಕೈದಿಯೊಬ್ಬನಿಗೆ ಉಳಿದ ಕೈದಿಗಳು ನೀಡುವ ಹಿಂಸೆ, ಜೈಲಿನೊಳಗೆ ನಡೆಯುವ ರಾಜಕೀಯ, ಜೈಲು ಸೇರಿರುವ ಮಗನಿಗಾಗಿ ಹಂಬಲಿಸುವ ಹೆತ್ತವರ ಕಥೆಯನ್ನು ಈ ಚಿತ್ರದ ಟ್ರೇಲರ್‌ನಲ್ಲಿ  ತೋರಿಸಲಾಗಿದೆ.

ಈ ಚಿತ್ರದ 'ಮ್ಯಾಡಿಯ ಮ್ಯಾಡ್‌ನೆಸ್ ಜೊತೆಗೆ ಜೈಲಿನ ಡಾರ್ಕ್‌ನೆಸ್ ಪಯಣ' ಎಂಬ ಅಡಿಬರಹ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.