ADVERTISEMENT

Devil: 'ಇದ್ರೆ ನೆಮ್ದಿಯಾಗಿರ್ಬೇಕ್' ಹಾಡನ್ನು ಸಂಭ್ರಮಿಸಿದ ದರ್ಶನ್ ಅಭಿಮಾನಿಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಡಿಸೆಂಬರ್ 2025, 5:54 IST
Last Updated 11 ಡಿಸೆಂಬರ್ 2025, 5:54 IST
   

ನಟ ದರ್ಶನ್ ನಟನೆಯ ‘ದಿ ಡೆವಿಲ್’ ಚಿತ್ರ ಇಂದು(ಗುರುವಾರ) ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಮುಂಜಾನೆ 6.30ರಿಂದಲೇ ಪ್ರದರ್ಶನ ಆರಂಭಗೊಂಡಿವೆ. ಈ ಚಿತ್ರದ 'ಇದ್ರೆ ನೆಮ್ದಿಯಾಗಿರ್ಬೇಕ್' ಹಾಡಿಗೆ ಅಭಿಮಾನಿಗಳು ಚಿತ್ರಮಂದಿರದ ಒಳಗೆ ಕುಣಿದು ಸಂಭ್ರಮಿಸಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲ್ ಸೇರಿದ್ದಾರೆ. ಪತ್ನಿ ವಿಜಯಲಕ್ಷ್ಮಿ, ಪುತ್ರ ವಿನೀಶ್, ಆಪ್ತ ಧನ್ವಿರ್ ಹಾಗೂ ಅವರ ಅಭಿಮಾನಿಗಳು ‘ದಿ ಡೆವಿಲ್’ ಬಿಡುಗಡೆಯನ್ನು ಸಂಭ್ರಮಿಸುತ್ತಿದ್ದಾರೆ.

ಈ ಚಿತ್ರವನ್ನು ಪ್ರಕಾಶ್ ವೀರ್ ಅವರ ನಿರ್ದೇಶನ ಮಾಡಿದ್ದಾರೆ.  ದರ್ಶನ್, ರಚನಾ ರೈ, ಶರ್ಮಿಳಾ ಮಾಂಡ್ರೆ ಮುಂತಾದವರು ನಟಿಸಿದ್ದಾರೆ. ‘ದಿ ಡೆವಿಲ್’ ಸಿನಿಮಾದ ‘ಒಂದೇ ಒಂದು ಸಲ’,  'ಇದ್ರೆ ನೆಮ್ದಿಯಾಗಿರ್ಬೇಕ್'  ಕೆಲ ತಿಂಗಳ ಹಿಂದೆ ಬಿಡುಗಡೆಯಾಗಿ ಅಭಿಮಾನಿಗಳಿಂದ ಮೆಚ್ಚುಗೆ ಪಡೆದುಕೊಂಡಿವೆ.