ADVERTISEMENT

ಮೃಣಾಲ್ ಠಾಕೂರ್ ಜತೆ ಮದುವೆ ವದಂತಿ: 'ಪ್ರೀತಿ' ಬಗ್ಗೆ ಧನುಷ್‌ ಹೇಳಿದ್ದಿಷ್ಟು..

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಜನವರಿ 2026, 16:29 IST
Last Updated 19 ಜನವರಿ 2026, 16:29 IST
   

ಚೆನ್ನೈ: ನಟಿ ಮೃಣಾಲ್ ಠಾಕೂರ್ ಅವರೊಂದಿಗೆ ನಟ ಧನುಷ್‌ ಹಸೆಮಣೆ ಏರಲಿದ್ದಾರೆ ಎಂಬ ವದಂತಿಗಳ ನಡುವೆ ಪ್ರೀತಿ ಕುರಿತು ನಟ ನೀಡಿದ್ದ ಹೇಳಿಕೆ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ.

ಮೃಣಾಲ್ ಠಾಕೂರ್ ಹಾಗೂ ಧನುಷ್‌ ಇಬ್ಬರು ಡೇಟಿಂಗ್‌ನಲ್ಲಿದ್ದರೂ ಎಂಬ ವದಂತಿಗಳು ಕಳೆದ ವರ್ಷದಿಂದ ಹರಿದಾಡುತ್ತಿವೆ. ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಇಬ್ಬರು ಫೆಬ್ರುವರಿಯಲ್ಲಿ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

‘ತೇರೆ ಇಷ್ಕ್ ಮೇ‘ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಪ್ರೀತಿ ಕುರಿತು ಧನುಷ್‌ ನೀಡಿದ ಹೇಳಿಕೆ ಇದೀಗ ಮತ್ತೆ ಹರಿದಾಡುತ್ತಿದೆ. ಪ್ರೀತಿ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರೀತಿ ಎಂಬುವುದು ಕೇವಲ ಅತಿಯಾದ ಭಾವನೆಯಷ್ಟೇ (ಭಾವೋದ್ವೇಗ) ಎಂದಿದ್ದರು.

ADVERTISEMENT

ಮೃಣಾಲ್ ಠಾಕೂರ್ ಅವರು ಸಾಲು ಸಾಲು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಇನ್ನೊಂದೆಡೆ ಧನುಷ್‌ ಅವರು ಮೃಣಾಲ್ ಅವರನ್ನು ಮದುವೆಯಾಗುತ್ತಿಲ್ಲ ಎಂದು ನಟನ ಆ‍ಪ್ತ ಮೂಲಗಳು ತಿಳಿಸಿವೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಧನುಷ್ ಮತ್ತು ಐಶ್ವರ್ಯಾ ರಜನಿಕಾಂತ್ ವಿಚ್ಛೇದನ

ನಟ ಧನುಷ್ ಅವರು ರಜನಿಕಾಂತ್ ಅವರ ಪುತ್ರಿ ಐಶ್ವರ್ಯಾ ರಜನಿಕಾಂತ್ ಅವರನ್ನು 2004ರಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದರು. ಕಾರಣಾಂತರಗಳಿಂದ ಈ ಜೋಡಿ 2022ರಲ್ಲಿ ನಾವು ದಾಂಪತ್ಯ ಜೀವನದಿಂದ ದೂರ ಉಳಿಯುತ್ತಿದ್ದೇವೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಹಂಚಿಕೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.