ADVERTISEMENT

ರಣವೀರ್ ಸಿಂಗ್ ನಟನೆಯ ಧುರಂಧರ್ ಸಿನಿಮಾ ಪ್ರದರ್ಶನ ತಡೆಹಿಡಿದ ಕೊಲ್ಲಿ ದೇಶಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಡಿಸೆಂಬರ್ 2025, 11:12 IST
Last Updated 12 ಡಿಸೆಂಬರ್ 2025, 11:12 IST
   

ರಣವೀರ್ ಸಿಂಗ್ ನಟನೆಯ ‘ಧುರಂಧರ್’ ಸಿನಿಮಾ ಕೆಲ ದಿನಗಳ ಹಿಂದೆ ವಿಶ್ವದಾದಂತ್ಯ ಬಿಡುಗಡೆಯಾಗಿ ಗಲ್ಲಾ ಪೆಟ್ಟಿಗೆಯಲ್ಲೂ ಸದ್ದು ಮಾಡುತ್ತಿದೆ. ಈ ನಡುವೆ ಕೊಲ್ಲಿ ದೇಶಗಳು (Gulf Countries) ಈ ಸಿನಿಮಾದ ಪ್ರದರ್ಶನ ತಡೆಹಿಡಿದಿವೆ.

ಕೊಲ್ಲಿ ದೇಶಗಳಾದ ಯುಎಇ, ಸೌದಿ ಅರೇಬಿಯಾ, ಕತಾರ್, ಬಹರೇನ್, ಕುವೈತ್ ಹಾಗೂ ಒಮಾನ್‌ನಲ್ಲಿ ‘ಧುರಂಧರ್’ ಚಿತ್ರದ ಪ್ರದರ್ಶನವನ್ನು ನಿಷೇಧಿಸಿದ್ದಾರೆ. ಈ ದೇಶಗಳಲ್ಲಿ ಭಾರತೀಯ ಸಿನಿಮಾಗಳು ಹೆಚ್ಚು ಪ್ರಸಿದ್ಧಿ ಪಡೆಯುತ್ತವೆ ಎಂಬ ಕಾರಣಕ್ಕೆ ಚಿತ್ರ ನಿರ್ಮಾಪಕರು ಸಿನಿಮಾ ಬಿಡುಗಡೆ ಮಾಡಲು ಸಿದ್ದತೆ ನಡೆಸಿಕೊಂಡಿದ್ದರು.

ಆದರೆ ಚಿತ್ರದ ಕುರಿತು ಮಾಹಿತಿ ಸಂಗ್ರಹಿಸಿದ ಅಧಿಕಾರಿಗಳು, ಈ ಸಿನಿಮಾದಲ್ಲಿ ಗಡಿ ವಿವಾದಕ್ಕೆ ಸಂಬಂಧಿಸಿದ ವಿಚಾರಗಳು ಇರುವುದರಿಂದ ಚಿತ್ರ ಪ್ರದರ್ಶನ ತಡೆಹಿಡಿದಿರುವುದಾಗಿ ವರದಿಯೊಂದು ಹೇಳಿದೆ.

ADVERTISEMENT

ಈ ದೇಶದಲ್ಲಿ ಬಾಲಿವುಡ್ ಚಿತ್ರಗಳು ನಿಷೇಧಕ್ಕೊಳಗಾಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ‘ಫೈಟರ್’, ‘ಸ್ಕೈ ಫೋರ್ಸ್’, ‘ದಿ ಡಿಪ್ಲೊಮ್ಯಾಟ್’, ‘ಆರ್ಟಿಕಲ್ 370’, ‘ಟೈಗರ್ 3’ ‘ದಿ ಕಾಶ್ಮೀರ್ ಫೈಲ್’ ಚಿತ್ರಗಳನ್ನು ನಿಷೇಧಿಸಲಾಗಿತ್ತು.

ಕೊಲ್ಲಿ ದೇಶಗಳಲ್ಲಿ ಈ ಚಿತ್ರದ ನಿಷೇಧದ ಹೊರತಾಗಿಯೂ, ‘ಧುರಂಧರ್‘ ಸಿನಿಮಾವು ಮೊದಲ ವಾರದಲ್ಲೇ ಭಾರತದಲ್ಲಿ ₹ 200 ಕೋಟಿ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ₹ 44.5 ಕೋಟಿ ಗಳಿಸಿದೆ.

ಆದಿತ್ಯ ಧರ್‌ ನಿರ್ದೇಶನದ ‘ಧುರಂಧರ್‘ ಸಿನಿಮಾದಲ್ಲಿ ರಣ್‌ವೀರ್ ಸಿಂಗ್, ಸಂಜಯ್ ದತ್, ಅಕ್ಷಯ ಖನ್ನಾ, ಆರ್. ಮಾಧವನ್, ಅರ್ಜುನ್ ರಾಂಪಾಲ್, ಸಾರಾ ಅರ್ಜುನ್ ಸೇರಿದಂತೆ ಅನೇಕರು ನಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.