ADVERTISEMENT

ಸೂರ್ಯ ನಟನೆಯ ಹೊಸ ಸಿನಿಮಾಗೆ ದಿಶಾ ಪಟಾನಿ ನಾಯಕಿ; ಚಿತ್ರೀಕರಣ ಆರಂಭ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಸೆಪ್ಟೆಂಬರ್ 2022, 5:40 IST
Last Updated 22 ಸೆಪ್ಟೆಂಬರ್ 2022, 5:40 IST
ದಿಶಾ ಪಟಾನಿ ಹಾಗೂ ಸೂರ್ಯ
ದಿಶಾ ಪಟಾನಿ ಹಾಗೂ ಸೂರ್ಯ   

ಬಾಲಿವುಡ್‌ನ ಹಾಟ್ ಬೆಡಗಿ ದಿಶಾ ಪಟಾನಿ ಸದ್ಯ ಗೋವಾದಲ್ಲಿದ್ದಾರೆ. ಹೊಸ ಸಿನಿಮಾ 'ಸೂರ್ಯ 42'ರಲ್ಲಿತಮಿಳು ನಟ ಸೂರ್ಯ ಅವರಿಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವ ಅವರು ಒಂದು ತಿಂಗಳು ಚಿತ್ರೀಕರಣದ ಸಲುವಾಗಿ ಇಲ್ಲಿಗೆ ಆಗಮಿಸಿದ್ದಾರೆ.

ಬುಧವಾರ ಮೊದಲ ದಿನದ ಶೂಟಿಂಗ್‌ನಲ್ಲಿ ಭಾಗಿಯಾದ ಚಿತ್ರ ಹಾಗೂ ವಿಡಿಯೊಗಳನ್ನು ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.

ತಾವು ಉಳಿದುಕೊಂಡಿರುವ ಹೋಟೆಲ್‌ ರೂಂ ನಿಂದಲೇ ಚಿತ್ರ ಹಾಗು ವಿಡಿಯೊಗಳನ್ನು ಸೆರೆಹಿಡಿದು ಹಂಚಿಕೊಂಡಿದ್ದಾರೆ. ಇವುಗಳಿಗೆ'#Suirya42, day 1' ಎಂದು ಕ್ಯಾಪ್ಷನ್‌ ಹಾಕಿದ್ದಾರೆ.

ADVERTISEMENT

ಇತ್ತೀಚೆಗೆ'ಸೂರ್ಯ 42' ಸಿನಿಮಾದ ಟೀಸರ್‌ ಹಂಚಿಕೊಂಡಿದ್ದ ದಿಶಾ, ಈ ಸಿನಿಮಾದಲ್ಲಿ ಅಭಿನಯಿಸುತ್ತಿರುವುದನ್ನು ಖಚಿತಪಡಿಸಿದ್ದರು. '2ಡಿ ಎಂಟರ್‌ಟೈನ್‌ಮೆಂಟ್‌' ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವಈ ಸಿನಿಮಾವನ್ನು ಸಿರುಥೈ ಶಿವ ನಿರ್ದೇಶಿಸುತ್ತಿದ್ದಾರೆ.

ಸೂರ್ಯ ನಟನೆಯ ಇತ್ತೀಚಿನ ಸೂರರೈ ಪೊಟ್ರು ಹಾಗೂ ಜೈ ಭೀಮ್‌ ಸಿನಿಮಾಗಳು ಭಾರಿ ಯಶಸ್ಸು ಗಳಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.