ADVERTISEMENT

ಕನ್ನಡ ಭಾಷೆಗೆ ಒಳ್ಳೆಯದಾಗುವುದಾದರೆ ಡಬ್ಬಿಂಗ್‌ಗೆ ನನ್ನ ವಿರೋಧವಿಲ್ಲ: ಯಶ್

ಕೆಜಿಎಫ್ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2018, 13:08 IST
Last Updated 9 ನವೆಂಬರ್ 2018, 13:08 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕನ್ನಡ ಚಿತ್ರರಂಗದ ಪಾಲಿನ ಬಹುಚರ್ಚಿತ ವಿಚಾರದ ಬಗ್ಗೆ ನಟ ಯಶ್ ಜಾಣತನದ ಮಾತು ಆಡಿದ್ದಾರೆ. ಅಂದಹಾಗೆ, ಯಶ್ ಅವರು ಪ್ರತಿಕ್ರಿಯೆ ನೀಡಿರುವುದು ಡಬ್ಬಿಂಗ್ ಬಗ್ಗೆ.

ಯಶ್ ಅಭಿನಯದ 'ಕೆಜಿಎಫ್' ಚಿತ್ರ ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ. ಟ್ರೇಲರ್ ಕೂಡ ಐದು ಭಾಷೆಗಳಲ್ಲಿ ಬಿಡುಗಡೆ ಆಗಿದೆ. ಟ್ರೇಲರ್‌ ಬಿಡುಗಡೆ ಸಮಯದಲ್ಲಿ ಯಶ್ ಅವರಿಗೆ ಪತ್ರಕರ್ತರಿಂದ ಡಬ್ಬಿಂಗ್ ವಿಚಾರವಾಗಿ ಪ್ರಶ್ನೆ ಎದುರಾಯಿತು.

'ಭಾರತದ ಬೇರೆ ಬೇರೆ ಭಾಷೆಗಳ ಜನ, ಸಿನಿಮಾಗಳನ್ನು ಡಬ್ಬಿಂಗ್ ಮೂಲಕ ತಮ್ಮದೇ ಭಾಷೆಯಲ್ಲಿ ವೀಕ್ಷಿಸುತ್ತಿದ್ದಾರೆ. ಕನ್ನಡದಲ್ಲಿ ಡಬ್ಬಿಂಗ್ ವಿಚಾರವಾಗಿ ತಮ್ಮ ನಿಲುವು ಏನು' ಎಂದು ಕೇಳಲಾಯಿತು.

ADVERTISEMENT

ಅದಕ್ಕೆ ಉತ್ತರವಾಗಿ ಯಶ್, 'ಕಾಲದ ಜೊತೆ ಹಲವು ವಿಷಯಗಳು ಬದಲಾಗುತ್ತಿರುತ್ತವೆ. ಭಾರತೀಯ ಸಿನಿಮಾಗಳನ್ನು ಇಂದು‌ ಚೀನಿಯರು ಕೂಡ ನೋಡುತ್ತಾರೆ. ಕನ್ನಡ ಭಾಷೆಗೆ ಒಳ್ಳೆಯದಾಗುತ್ತದೆ ಎಂದಾದರೆ ನನ್ನದೇನೂ ವಿರೋಧವಿಲ್ಲ. ಆದರೆ, ಡಬ್ಬಿಂಗ್‌ನಿಂದ ಸ್ಥಳೀಯ ಕಲಾವಿದರಿಗೆ ತೊಂದರೆ ಆಗುತ್ತದೆ. ಅದರ ಬಗ್ಗೆಯೂ ಗಮನ ನೀಡಬೇಕಾಗುತ್ತದೆ' ಎಂದರು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.