ADVERTISEMENT

‘ವಾತಿ‘ ಡೈರೆಕ್ಟರ್‌ ವೆಂಕಿ ಅಟ್ಲೂರಿ ಜೊತೆ ದುಲ್ಕರ್‌ ಸಲ್ಮಾನ್‌ ಮುಂದಿನ ಸಿನಿಮಾ

ಪಿಟಿಐ
Published 14 ಮೇ 2023, 9:25 IST
Last Updated 14 ಮೇ 2023, 9:25 IST
(Insta/Sithara Entertainments)
(Insta/Sithara Entertainments)   

ಖ್ಯಾತ ನಿರ್ದೇಶಕ ವೆಂಕಿ ಅಟ್ಲೂರಿ ಹಾಗೂ ಮಲಯಾಳಂ ಸ್ಟಾರ್ ನಟ ದುಲ್ಕರ್ ಸಲ್ಮಾನ್ ಚಿತ್ರವೊಂದರಲ್ಲಿ ಜೊತೆಯಾಗಲಿದ್ದು, ಸಿತಾರಾ ಎಂಟರ್‌ಟೈನ್‌ಮೆಂಟ್‌ ಈ ಚಿತ್ರದ ನಿರ್ಮಾಣ ಮಾಡಲಿದೆ.

ಈ ಬಗ್ಗೆ ಚಿತ್ರತಂಡ ಇನ್‌ಸ್ಟಾಗ್ರಾಂ ಅಧಿಕೃತ ಪೇಜ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದೆ. ‘ಸಿತಾರಾ ಎಂಟರ್‌ಟೈನ್‌ಮೆಂಟ್‌‘ ಮತ್ತು ‘ಫಾರ್ಚೂನ್‌ ಫೋರ್‌ ಸಿನಿಮಾಸ್‌‘ ಜಂಟಿಯಾಗಿ ನಿರ್ಮಾಣದ ಹೊಣೆ ಹೊತ್ತಿವೆ.

ಅಕ್ಟೋಬರ್‌ ತಿಂಗಳಿನಲ್ಲಿ ಚಿತ್ರದ ಶೂಟಿಂಗ್ ಪ್ರಾರಂಭವಾಗಲಿದ್ದು, 2024ಕ್ಕೆ ಚಿತ್ರ ಬಿಡುಗಡೆಯಾಲಿದೆ ಎಂದು ಚಿತ್ರತಂಡ ತಿಳಿಸಿದೆ.

ADVERTISEMENT

ಸೀತಾರಾಮ ಕಲ್ಯಾಣ ಸಿನಿಮಾದ ನಂತರ ದುಲ್ಕರ್‌ ಸಲ್ಮಾನ್‌ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದು, ಅಭಿಲಾಷ್‌ ಜೋಷಿ ನಿರ್ದೇಶನದ ಗ್ಯಾಂಗ್‌ಸ್ಟರ್‌ ಸಿನಿಮಾ ‘ಕಿಂಗ್‌ ಆಫ್‌ ಕೋಥಾ‘ ದಲ್ಲಿಯೂ ದುಲ್ಕರ್‌ ಕಾಣಿಸಿಕೊಳ್ಳಲಿದ್ದಾರೆ.

ತಮಿಳಿನ ‘ವಾತಿ‘ ಚಿತ್ರದ ಮೂಲಕ ವೆಂಕಿ ಅಟ್ಲೂರಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದರು. ತಮಿಳು ನಟ ಧನುಷ್‌ ‘ವಾತಿ‘ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಹಾಡು–ನೃತ್ಯ, ಧನುಷ್‌ ಖಡಕ್‌ ಆಕ್ಟಿಂಗ್ ಮೂಲಕವೇ ಚಿತ್ರ ಜನಪ್ರಿಯತೆ ಗಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.