
ಸುದೀಪ್, ದರ್ಶನ್ ಅಭಿಮಾನಿ
ನಟ ದರ್ಶನ್ ಅಭಿನಯದ ಬಹುನಿರೀಕ್ಷಿತ ‘ದಿ ಡೆವಿಲ್’ ಸಿನಿಮಾ ಇಂದು (ಡಿಸೆಂಬರ್ 11) ಬಿಡುಗಡೆಯಾಗಿದೆ. ನೆಚ್ಚಿನ ನಟನ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಚಿತ್ರಮಂದಿರಗಳತ್ತ ಮುಖ ಮಾಡಿದ್ದಾರೆ. ಇನ್ನೂ, ದಿ ಡೆವಿಲ್ ಫಸ್ಟ್ ಶೋ ವೀಕ್ಷಿಸಿದ ಅಭಿಮಾನಿಗಳು ಚಿತ್ರಮಂದಿರದಲ್ಲೇ ಕುಣಿದು ಕುಪ್ಪಳಿಸಿದ್ದಾರೆ.
ಈ ನಡುವೆ ದಿ ಡೆವಿಲ್ ಸಿನಿಮಾ ವೀಕ್ಷಿಸಲು ನರ್ತಕಿ ಚಿತ್ರಮಂದಿರಕ್ಕೆ ಬಂದಿದ್ದ ಮಹಿಳಾ ಅಭಿಮಾನಿಯೊಬ್ಬರು ಎಲ್ಲರ ಗಮನ ಸೆಳೆದಿದ್ದಾರೆ. ಮಹಿಳಾ ಅಭಿಮಾನಿಯೊಬ್ಬರು ಅವರ ಎಡಭಾಗ ಹಾಗೂ ಬಲಭಾಗ ತೋಳಿನ ಮೇಲೆ ನೆಚ್ಚಿನ ನಟರ ಭಾವಚಿತ್ರವನ್ನು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಬಲಭಾಗದಲ್ಲಿ ಸುದೀಪ್ ಟ್ಯಾಟೂವನ್ನು ಹಾಕಿಸಿಕೊಂಡರೇ, ಎಡಭಾಗದಲ್ಲಿ ದರ್ಶನ್ ಅವರ ಟ್ಯಾಟೂವನ್ನು ಹಾಕಿಸಿಕೊಂಡಿದ್ದಾರೆ.
ಇದೇ ವೇಳೆ ಈ ಕುರಿತು ಮಾತನಾಡಿದ ಮಹಿಳಾ ಅಭಿಮಾನಿ, ‘ದರ್ಶನ್ ಸರ್ ಪ್ರಾಮಾಣಿಕ ವ್ಯಕ್ತಿ. ಅವರು ಎಲ್ಲಿದ್ದಾರೆ, ಹೇಗಿದ್ದಾರೆ ಅನ್ನೋದು ಮುಖ್ಯವಲ್ಲ. ಆದರೆ ನಾವೆಲ್ಲಾ ಅವರನ್ನು ಎಷ್ಟು ಪ್ರೀತಿ ಮಾಡುತ್ತೇವೆ ಅನ್ನೋದು ಮುಖ್ಯ. ಹೀಗಾಗಿ ಡೆವಿಲ್ ಸಿನಿಮಾ ಸಕ್ಸಸ್ ಕಾಣುತ್ತಿದೆ. ಸಿನಿಮಾ ನೋಡಲು ನಾನು ಕಾತರದಿಂದ ಕಾಯುತ್ತಿದ್ದೇನೆ. ನನಗೆ ದರ್ಶನ್ ಸರ್ ಅಂದರೆ ತುಂಬಾ ಇಷ್ಟ. ಜೀವನದಲ್ಲಿ ನನ್ನ ಕುಟುಂಬಸ್ಥರು ಬಿಟ್ಟರೇ ತುಂಬಾ ಇಷ್ಟ ಪಟ್ಟಿರೋದು ಅಂದರೆ ದರ್ಶನ್ ಹಾಗೂ ಸುದೀಪ್ ಅಣ್ಣನನ್ನು. ಸುದೀಪ್ ಸರ್‌ಗೆ ಅಣ್ಣನ ಸ್ಥಾನ ಕೊಟ್ಟಿದ್ದೀನಿ. ಅದಕ್ಕಾಗಿ ನನ್ನ ಅಣ್ಣ ಅಂತ ಅವರ ಟ್ಯಾಟೂ ಹಾಕಿಸಿಕೊಂಡಿದ್ದೀನಿ. ಇನ್ನೊಂದು ಹೃದಯ ಪಕ್ಕ ದರ್ಶನ್ ಅವರ ಟ್ಯಾಟೂ ಹಾಕಿಸಿಕೊಂಡಿದ್ದೀನಿ. ಇವರು ಯಾವಾಗಲೂ ನನ್ನ ಹೃದಯದಲ್ಲಿ ಇರುತ್ತಾರೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.