
ಅರ್ಚನಾ ಉಡುಪ ಸೇರಿದಂತೆ ಅನೇಕ ಗಾಯಕರು ಗಗನ ಚುಕ್ಕಿ ಜಲಪಾತದ ಎದುರು ಹಾಡು ಹಾಡಿ ಸಂಭ್ರಮಿಸಿರುವ ವಿಡಿಯೊವನ್ನು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿರುವ ಈ ಜಲಪಾತವು ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಇದೀಗ, ಗಾಯಕರು ಜಲಪಾತದ ಎದುರು ಹಾಡಿ ಸಂಭ್ರಮಿಸಿರುವುದಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ನಟಿ, ಗಾಯಕಿ ಅರ್ಚನಾ ಉಡುಪ ಅವರು ಕೆಲ ದಿನಗಳ ಹಿಂದೆ ಗಾನ ಕೋಗಿಲೆ ಎಸ್. ಜಾನಕಿ ಅವರನ್ನು ಭೇಟಿ ಮಾಡಿ, ಅವರು ಎದುರು ಹಾಡಿ ಮೆಚ್ಚುಗೆಗೆ ಪಾತ್ರವಾಗಿದ್ದರು. 1998ರಲ್ಲಿ ಝೀ ಹಿಂದಿ ಸರೆಗಮಪ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ಪ್ರಥಮ ಸ್ಪರ್ಧಿಯಾಗಿ ಗೆಲುವು ಸಾಧಿಸಿದ ಅರ್ಚನಾ, ನಂತರ ಕನ್ನಡದ ವಿವಿಧ ವಾಹಿನಿಗಳಲ್ಲಿ ಸಂಗೀತ ಕಾರ್ಯಕ್ರಮಗಳ ನಿರೂಪಕಿಯಾಗಿ, ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕಲರ್ಸ್ ವಾಹಿನಿಯ 'ಕನ್ನಡ ಕೋಗಿಲೆ’ ಕಾರ್ಯಕ್ರಮದಲ್ಲೂ ತೀರ್ಪುಗಾರರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.