‘ಗತ ವೈಭವ’ ಚಿತ್ರದ ನಟ ದುಷ್ಯಂತ್ ಅವರು ಮೆಹಂದಿ ಸಂಭ್ರಮದಲ್ಲಿದ್ದಾರೆ.
ಗುಬ್ಬಿ ಕ್ಷೇತ್ರದ ಶಾಸಕ ಎಸ್.ಆರ್ ಶ್ರೀನಿವಾಸ್ ಅವರ ಪುತ್ರ ದುಷ್ಯಂತ್ ಅವರು ಹಸೆಮಣೆ ಏರಲು ಸಜ್ಜಾಗಿದ್ದಾರೆ.
ದುಷ್ಯಂತ್ ಅವರು ಮಾಜಿ ಸಂಸದ ಮುದ್ದಹನುಮೇಗೌಡ ಅವರ ಪುತ್ರಿ ರಚನಾ ಅವರ ಜತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ದುಷ್ಯಂತ್ ಅವರು ರಚನಾ ಜೊತೆ ಕೆಲ ದಿನಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಜೋಡಿ ಸದ್ಯ ಮೆಹಂದಿ ಸಂಭ್ರಮದಲ್ಲಿದ್ದಾರೆ.
ದುಷ್ಯಂತ್ ವರು ಭಾವಿ ಪತ್ನಿ ರಚನಾ ಅವರಿಗೆ ಮೆಹಂದಿ ಹಾಕುವ ಚಿತ್ರಗಳನ್ನು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಅರಮನೆ ಮೈದಾನದಲ್ಲಿ ಫೆ.26ರಂದು ದುಷ್ಯಂತ್ ಹಾಗೂ ರಚನಾ ಅವರ ವಿವಾಹ ನೆರವೇರಲಿದೆ.
ದುಷ್ಯಂತ್ ಅವರ ಆರತಕ್ಷತೆ ಕಾರ್ಯಕ್ರಮವು ಮಾರ್ಚ್ 1ರಂದು ಅರಮನೆ ಮೈದಾನದಲ್ಲಿ ನಡೆಯಲಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ನೀಡಿದ್ದಾರೆ.
ದುಷ್ಯಂತ್ ಅವರು ಸಿಂಪಲ್ ಸುನಿ ನಿರ್ದೇಶನದ ‘ಗತ ವೈಭವ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.