ಬೆಂಗಳೂರು: ಕ್ರೂಸ್ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಸಿಬಿ ಆರ್ಯನ್ ಖಾನ್‌ರನ್ನು ಬಂಧಿಸಿದೆ.ಪುತ್ರನ ಆಗಮನಕ್ಕಾಗಿ ಶಾರುಖ್ ಮತ್ತು ಗೌರಿ ದಂಪತಿ ಕಾದು ಕುಳಿತಿದ್ದು, ಮನೆಯಲ್ಲಿ ಸಂಭ್ರಮವಿಲ್ಲ.
ಈ ಮಧ್ಯೆ ಆರ್ಯನ್ ಖಾನ್ ಬರುವವರೆಗೂ ಮನೆಯಲ್ಲಿ ಯಾವುದೇ ರೀತಿಯ ಸಿಹಿ ತಿನಿಸು ಅಡುಗೆ ಮಾಡಬಾರದು ಎಂದು ಗೌರಿ ಖಾನ್ ಅಡುಗೆಯವರಿಗೆ ಹೇಳಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.
ಮನೆಯಲ್ಲಿನ ಅಡುಗೆ ಸಿಬ್ಬಂದಿಗೆ ಗೌರಿ ಖಾನ್ ಈ ಕುರಿತು ಸೂಚನೆ ನೀಡಿದ್ದಾರೆ ಎಂದು ಇಂಡಿಯಾ ಟುಡೇ ವರದಿಯಲ್ಲಿ ಹೇಳಿದೆ.
ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅವರ ಜಾಮೀನು ಅರ್ಜಿ ವಿಚಾರಣೆ ಅ. 20, ಬುಧವಾರ ನಡೆಯಲಿದೆ.
ಅ. 2ರಂದು ಆರ್ಯನ್ ಖಾನ್ ಬಂಧನವಾಗಿದ್ದು, ಅದಾದ ನಂತರ ಅವರು ನ್ಯಾಯಾಂಗ ಬಂಧನ ಮತ್ತು ಎನ್‌ಸಿಬಿ ಬಂಧನಕ್ಕೆ ಒಳಗಾಗಿ ಮುಂಬೈನ ಅರ್ಥರ್ ರೋಡ್ ಜೈಲಿನಲ್ಲಿಯೇ ಇರಬೇಕಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.