
ನಟಿ ಹನ್ಸಿಕಾ ಮೊಟ್ವಾನಿ ದಂಪತಿ
ಚಿತ್ರ: ಇನ್‌ಸ್ಟಾಗ್ರಾಂ
ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್ ಜೊತೆ ‘ಬಿಂದಾಸ್’ ಸಿನಿಮಾದಲ್ಲಿ ನಟಿಸಿದ್ದ ಬಹುಭಾಷಾ ನಟಿ ಹನ್ಸಿಕಾ ಮೊಟ್ವಾನಿ ದಾಂಪತ್ಯದಲ್ಲಿ ಬಿರುಕು ಮೂಡಿದೆಯಾ ಎಂಬ ಅನುಮಾನ ಶುರುವಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ನಟಿ ಹನ್ಸಿಕಾ ಮೊಟ್ವಾನಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದ ಪತಿಯೊಂದಿಗಿದ್ದ ಪೋಸ್ಟ್‌ಗಳನ್ನು ಅಳಿಸಿ ಹಾಕಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳ ವಿಚ್ಛೇದನ ಸಂಖ್ಯೆ ಹೆಚ್ಚುತ್ತಿವೆ. ವಿಶೇಷವಾಗಿ ಸಿನಿಮಾ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು ತಮ್ಮ ಸಂಗಾತಿಯಿಂದ ದೂರವಾಗುತ್ತಿದ್ದಾರೆ. ಈಗ, ಅದೇ ಸಾಲಿನಲ್ಲಿ ಮತ್ತೊಬ್ಬ ಜನಪ್ರಿಯ ನಾಯಕಿ ಸೇರಿಕೊಂಡರೇ ಎಂಬ ಸಂಶಯ ಮೂಡಿದೆ.
ನಟಿ ಹನ್ಸಿಕಾ ಮೊಟ್ವಾನಿ ದಂಪತಿ
ತಮಿಳು ಚಿತ್ರರಂಗದ ಬಹುಬೇಡಿಕೆಯ ನಟಿ ಹನ್ಸಿಕಾ ಮೊಟ್ವಾನಿ ಅವರು 2022ರ ಡಿಸೆಂಬರ್‌ನಲ್ಲಿ ರಾಜಸ್ಥಾನದ ಜೈಪುರದಲ್ಲಿರುವ ಮುಂಡೋಟಾ ಕೋಟೆಯಲ್ಲಿ ಉದ್ಯಮಿ ಸೋಹೆಲ್ ಕಟಾರಿಯಾ ಅವರೊಂದಿಗೆ ಅದ್ಧೂರಿಯಾಗಿ ಮದುವೆಯಾಗಿದ್ದರು. ನಟಿ ಮದುವೆಯಾದ ಸೋಹೆಲ್ ಬೇರೆ ಯಾರು ಅಲ್ಲ, ಹನ್ಸಿಕಾ ಅವರ ಆಪ್ತ ಗೆಳತಿ ರಿಂಕಿಯ ಮಾಜಿ ಪತಿ ಎಂಬ ಆರೋಪ ಕೇಳಿ ಬಂದಿತ್ತು. ಆದರೆ ಆ ಬಗ್ಗೆ ನಟಿ ‘ಇದೆಲ್ಲ ಮಾಧ್ಯಮಗಳ ಹಾಗೂ ಸೋಶಿಯಲ್ ಮೀಡಿಯಾಗಳ ಸೃಷ್ಟಿ. ಇದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಅಸಲಿಗೆ ಸೋಹೆಲ್ ನನ್ನ ಅಣ್ಣನ ಸ್ನೇಹಿತರಾಗಿದ್ದರು’ ಎಂದು ಹೇಳಿದ್ದರು.
ನಟಿ ಹನ್ಸಿಕಾ ಮೊಟ್ವಾನಿ
ಮದುವೆಗೂ ಮೊದಲು ಸೋಹೆಲ್ ಹಾಗೂ ನಟಿ ಹನ್ಸಿಕಾ ತುಂಬಾ ಆತ್ಮೀಯರಾಗಿದ್ದರು. ನಂತರ ದೇಶ ವಿದೇಶಗಳಲ್ಲಿ ಸುತ್ತಾಡಿದ್ದರು. ಆ ಸಮಯದಲ್ಲಿ ದಂಪತಿ ಫೋಟೋಗಳು ಎಲ್ಲರ ಗಮನ ಸೆಳೆದಿದ್ದವು. ಈಗ ಇಬ್ಬರೂ ಬೇರೆಯಾಗಿದ್ದಾರೆ ಎಂಬ ವದಂತಿಗಳು ಹಬ್ಬಿವೆ. ಈ ಮೊದಲು ನಟಿ ಪತಿಯ ಜೊತೆಗಿರುವ ಫೋಟೊಗಳನ್ನು ಹಂಚಿಕೊಂಡಿದ್ದರು.
ಆದರೆ ಈಗ ಇನ್‌ಸ್ಟಾಗ್ರಾಂನಲ್ಲಿ ಪತಿಯ ಜೊತೆಗಿರುವ ಫೋಟೊಗಳನ್ನು ತೆಗೆದು ಹಾಕಿದ್ದಾರೆ. ಅಲ್ಲದೆ ಕಳೆದ ಮೂರು ವರ್ಷಗಳಿಂದ ದಂಪತಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ವರದಿಯಾಗಿದೆ. ನಟಿ ಹನ್ಸಿಕಾ ತಾಯಿಯೊಂದಿಗೆ ವಾಸವಾಗಿದ್ದರೆ, ಪತಿ ಅವರ ಹೆತ್ತವರೊಂದಿಗೆ ಇದ್ದಾರೆ ಎಂಬ ವದಂತಿ ಹಬ್ಬಿದೆ. ಈ ಬಗ್ಗೆ ನಟಿಯಾಗಿಲಿ, ಅವರ ಪತಿಯಾಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಅಭಿಮಾನಿಗಳಲ್ಲಿ ಗೊಂದಲ ಮನೆ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.