ADVERTISEMENT

57ನೇ ವಸಂತಕ್ಕೆ ಕಾಲಿಟ್ಟ ಅಮೀರ್‌ ಖಾನ್‌: ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2022, 10:24 IST
Last Updated 14 ಮಾರ್ಚ್ 2022, 10:24 IST
ಅಮೀರ್‌ ಖಾನ್‌
ಅಮೀರ್‌ ಖಾನ್‌   

ಬಾಲಿವುಡ್‌ನ ಖ್ಯಾತ ನಟ ಅಮೀರ್‌ ಖಾನ್‌ ಇಂದು (ಮಾ.14) 57ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

'ಮಿ. ಪರ್ಫೆಕ್ಷನಿಸ್ಟ್‌' ಎಂದೇ ಖ್ಯಾತರಾಗಿರುವ ಅಮೀರ್‌ ಖಾನ್‌ ಅವರುಮನೆಯಲ್ಲಿ ಸರಳವಾಗಿ ಜನ್ಮದಿನ ಆಚರಿಸಿಕೊಂಡಿದ್ದಾರೆ. ಬಾಲಿವುಡ್‌ ಸೇರಿದಂತೆ ತಮಿಳು, ತೆಲುಗು, ಕನ್ನಡ ಸಿನಿಮಾರಂಗದ ತಾರೆಯರು ಕೂಡ ಅಮೀರ್‌ ಖಾನ್‌ಗೆ ಶುಭಾಶಯ ಕೋರಿದ್ದಾರೆ.

ಸಾಮಾಜಿಕ ಮಾಧ್ಯಮಗಳಾದ ಟ್ವೀಟರ್, ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಮೂಲಕ ಅಭಿಮಾನಿಗಳು ಜನ್ಮದಿನದಶುಭಾಶಯಗಳ ಫೋಸ್ಟ್‌ಗಳನ್ನು ಹಾಕುತ್ತಿದ್ದಾರೆ.

ADVERTISEMENT

ವಿಭಿನ್ನ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುವ ಅಮೀರ್​ ಖಾನ್ 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಾಲನಟನಾಗಿ ಚಿತ್ರರಂಗ ಪ್ರವೇಶ ಮಾಡಿದ ಅವರು ಜಗತ್ತೇ ಮೆಚ್ಚುವ ನಟನಾಗಿ ಬೆಳೆದಿದ್ದಾರೆ.

ಅಮೀರ್ ಖಾನ್‌ ಅವರ ’ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಬಿಡುಗಡೆ ಸಿದ್ಧವಾಗಿದೆ. ಈ ಚಿತ್ರ ಏಪ್ರಿಲ್‌ 14ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿದೆ.

ಲಗಾನ್ (2001), ಗಜಿನಿ (2008), 3 ಈಡಿಯಟ್ಸ್ (2009), ಪಿಕೆ (2014), ದಂಗಲ್ (2016) ಸಿನಿಮಾಗಳು ಅಮೀರ್‌ ಖಾನ್‌ಗೆ ಖ್ಯಾತಿ ತಂದುಕೊಟ್ಟಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.