ADVERTISEMENT

ವಿಕ್ಕಿ ಕೌಶಲ್ ಕುಟುಂಬದೊಂದಿಗೆ ಕತ್ರಿನಾ ಹೋಳಿ ಸಂಭ್ರಮ: ಫೋಟೊ ವೈರಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಮಾರ್ಚ್ 2022, 5:01 IST
Last Updated 19 ಮಾರ್ಚ್ 2022, 5:01 IST
ಹೋಳಿ ಸಂಭ್ರಮದಲ್ಲಿ ಕತ್ರಿನಾ ಕೈಫ್‌ -ವಿಕ್ಕಿ ಕೌಶಲ್ ದಂಪತಿ (ಇನ್‌ಸ್ಟಾಗ್ರಾಮ್ ಚಿತ್ರ)
ಹೋಳಿ ಸಂಭ್ರಮದಲ್ಲಿ ಕತ್ರಿನಾ ಕೈಫ್‌ -ವಿಕ್ಕಿ ಕೌಶಲ್ ದಂಪತಿ (ಇನ್‌ಸ್ಟಾಗ್ರಾಮ್ ಚಿತ್ರ)   

ಮುಂಬೈ: ಬಾಲಿವುಡ್‌ನಕತ್ರಿನಾ ಕೈಫ್‌ -ವಿಕ್ಕಿ ಕೌಶಲ್ ದಂಪತಿ ಮದುವೆ ಬಳಿಕ ಮೊದಲ ಹೋಳಿ ಹಬ್ಬವನ್ನು ಕುಟುಂಬಸ್ಥರೊಂದಿಗೆ ಸಂಭ್ರಮದಿಂದ ಆಚರಿಸಿದ್ದಾರೆ.

ಸಂಭ್ರಮದ ಫೋಟೊವನ್ನು ಕತ್ರಿನಾ, ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಚಿತ್ರದಲ್ಲಿ ವಿಕ್ಕಿಯ ತಾಯಿ ವೀಣಾ, ತಂದೆ ಶ್ಯಾಮ್ ಮತ್ತು ಸಹೋದರ ಸನ್ನಿ ಇದ್ದಾರೆ. ಎಲ್ಲರೂ ಬಣ್ಣ ಬಳಿದುಕೊಂಡು ಸಡಗರದಿಂದ ಹಬ್ಬವನ್ನು ಆಚರಿಸಿರುವುದನ್ನು ಕಾಣಬಹುದಾಗಿದೆ.

‘ಹ್ಯಾಪಿ ಹೋಳಿ’ ಎಂದು ಕತ್ರಿನಾ ಬರೆದುಕೊಂಡಿದ್ದಾರೆ. ಈ ಪೋಸ್ಟ್‌ಗೆ ಶ್ವೇತಾ ಬಚ್ಚನ್ ಸೇರಿದಂತೆ ಅನೇಕರು ಶುಭಾಶಯ ತಿಳಿಸುವ ಮೂಲಕ ಪ್ರತಿಕ್ರಿಯಿಸಿದ್ದಾರೆ.

ADVERTISEMENT

ಫರ್ಹಾನ್ ಆ್ಯಕ್ಷನ್ ಕಟ್‌ ಹೇಳುತ್ತಿರುವ ‘ಜೀ ಲೆ ಜರಾ’ ಚಿತ್ರದಲ್ಲಿ ಕತ್ರಿನಾ ಕೈಫ್ ನಟಿಸುತ್ತಿದ್ದಾರೆ.

ಲಕ್ಷ್ಮಣ್ ಉಟೇಕರ್ ನಿರ್ದೇಶನದ ಹೆಸರಿಡದ ಚಿತ್ರದಲ್ಲಿ ವಿಕ್ಕಿ ಕೌಶಲ್‌, ಸಾರಾ ಅಲಿ ಖಾನ್‌ ಅಭಿನಯಿಸುತ್ತಿದ್ದು, ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ.

2021ರ ಡಿ. 9ರಂದು ರಾಜಸ್ಥಾನದ ಸವಾಯಿ ಮಾಧೋಪುರದಲ್ಲಿ ವಿಕ್ಕಿ ಕೌಶಲ್‌ ಮತ್ತು ಕತ್ರಿನಾ ಕೈಫ್ ಅದ್ಧೂರಿಯಾಗಿ ವಿವಾಹವಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.