
ನವದೆಹಲಿ : ಸಿಮೋನ್ ಆಶ್ಲೇ ಮತ್ತು ಸೂರಜ್ ಶರ್ಮಾ ನಟಿಸಿರುವ ‘ದಿಸ್ ಟೆಂಪ್ಟಿಂಗ್ ಮ್ಯಾಡ್ನೆಸ್‘ ಚಿತ್ರವು ನವೆಂಬರ್ 27ರಂದು ಗೋವಾದಲ್ಲಿ ನಡೆಯುವ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (ಐಎಫ್‌ಎಫ್‌ಐ) ಮೊದಲ ಪ್ರದರ್ಶನಗೊಳ್ಳಲಿದೆ.
ಈ ಚಿತ್ರವನ್ನು ಜೆನ್ನಿಫರ್ ಇ ಮಾಂಟ್‌ಗೊಮೆರಿ ನಿರ್ದೇಶಿಸಿದ್ದಾರೆ.
ಈ ಸಿನಿಮಾದ ನಾಯಕಿ ಮಿಯಾ (ಸಿಮೋನ್ ಆಶ್ಲೇ) ಕೋಮಾಕ್ಕೆ ಒಳಗಾಗಿ, ಅವಳ ಜೀವನದ ಅನೇಕ ವಿಷಯಗಳು ಮರೆತು ಹೋಗಿರುತ್ತದೆ. ಅದೇ ಸಂದರ್ಭದಲ್ಲಿ ಅವಳ ಪತಿಯೂ ಕಾಣೆ ಆಗಿರುತ್ತಾರೆ. ಕೆಲವು ವರ್ಷಗಳ ನಂತರ ಅವಳ ಆರೋಗ್ಯವು ಸುಧಾರಿಸಿ ಕೋಮಾದಿಂದ ಹೊರಬರುತ್ತಾಳೆ. ಬಳಿಕ ತಮ್ಮವರ ನೆನಪು ಮರುಕಳಿಸಿ ಕುಟಂಬದ ಜತೆ ಸೇರುತ್ತಾಳಾ ಎಂಬುವುದು ಈ ಚಿತ್ರದ ಕಥೆ.
ಅದೇ ಚಲನಚಿತ್ರೋತ್ಸವದಲ್ಲಿ ಇಶಾ ಪುಂಗಲಿಯಾ ನಿರ್ದೇಶನದ, ಜಾನ್ ಅಬ್ರಹಾಂ ಪ್ರಸ್ತುತಪಡಿಸುತ್ತಿರುವ ‘ಓಸ್ಲೋ: ಎ ಟೇಲ್ ಆಫ್ ಎ ಪ್ರಾಮಿಸ್’ ಸಾಕ್ಷ್ಯಚಿತ್ರ ಕೂಡ ತೆರೆ ಕಾಣಲಿದೆ. ಪ್ರಾಣಿಗಳಿಗೂ ಮನುಷ್ಯರ ನಡುವಿನ ಉತ್ತಮ ಬಾಂಧವ್ಯ ಕುರಿತ ಸಾಕ್ಷ್ಯ ಚಿತ್ರ ಇದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.