
ಮುಂಬೈ: ಹಿಂದಿ ಒಟಿಟಿ ಸರಣಿ ‘ಜಮ್ತಾರಾ2’ ಮರಾಠಿ ನಟ ಸಚಿನ್ ಚಂದವಾಡೆ (25) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಸಚಿನ್ ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ಪರೋಲಾದ ಉಂಡಿರ್ಖೇಡಾ ಗ್ರಾಮದಲ್ಲಿ ವಾಸಿಸುತ್ತಿದ್ದರು. ಅವರು ತಮ್ಮ ನಿವಾಸದಲ್ಲಿ ಅ. 23ರಂದು ಸಂಜೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆ ಬಳಿಕ ಕುಟುಂಬಸ್ಥರು ಸಚಿನ್ ಅವರನ್ನು ಧುಲೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಅ. 24ರಂದು ಬೆಳ್ಳಗಿನ ಸಮಯದಲ್ಲಿ ಮೃತರಾಗಿದ್ದಾರೆಂದು ಅಧಿಕಾರಿ ತಿಳಿಸಿದ್ದಾರೆ.
ಮೃತರಾಗುವ ಕೆಲವು ದಿನಗಳ ಮೊದಲು, ಸಚಿನ್ ಚಂದವಾಡೆ ಅವರು ತಮ್ಮ ಮುಂಬರುವ ಮರಾಠಿ ಚಿತ್ರ ‘ಅಸುರ್ವಾನ್‘ ಸಿನಿಮಾದ ಪೋಸ್ಟರ್ ಹಿಡಿದ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಇವರು ನಟನೆಯ ಜೊತೆಗೆ, ಚಂದವಾಡೆ ಪುಣೆಯ ಕಂಪನಿಯೊಂದರಲ್ಲಿ ಐಟಿ ವೃತ್ತಿಪರ ಕೆಲಸ ಮಾಡುತ್ತಿದ್ದರು ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
ಅವರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.