ADVERTISEMENT

ಮಲೇಷಿಯಾದ ನ್ಯಾಷನಲ್ ಸ್ಟೇಡಿಯಂನಲ್ಲಿ ʼಜನನಾಯಕನ್ʼ ಆಡಿಯೊ ಬಿಡುಗಡೆ! ಭಾರಿ ಜನ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2025, 5:35 IST
Last Updated 28 ಡಿಸೆಂಬರ್ 2025, 5:35 IST
<div class="paragraphs"><p>ʼಜನನಾಯಕನ್ʼ </p></div>

ʼಜನನಾಯಕನ್ʼ

   

ಬೆಂಗಳೂರು: ಕೆವಿಎನ್ ಪ್ರೊಡಕ್ಷನ್ ಸಂಸ್ಥೆ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ತಮಿಳು ನಟ ವಿಜಯ್ ಅವರ ‘ಜನ ನಾಯಕನ್’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಶನಿವಾರ ಸಂಜೆ ಮಲೇಷಿಯಾದಲ್ಲಿ ಚಿತ್ರದ ಆಡಿಯೊ ಲಾಂಚ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ.

ಮಲೇಷಿಯಾದ ರಾಜಧಾನಿ ಕೌಲಾಲಂಪುರದ ಬುಕೀತ್ ಜಲೀಲ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಆಡಿಯೋ ಲಾಂಚ್ ಮಾಡಲಾಗಿದೆ. ಭಾರಿ ಸಂಖ್ಯೆಯಲ್ಲಿ ವಿಜಯ್ ಅಭಿಮಾನಿಗಳು ಜಮಾವಣೆ ಆಗಿದ್ದರು. ಹಾಗಾಗಿಯೇ ಕಾರ್ಯಕ್ರಮಕ್ಕೆ ಮಲೇಷಿಯಾ ಸರ್ಕಾರವೇ ಭದ್ರತಾ ವ್ಯವಸ್ಥೆ ಕಲ್ಪಿಸಿತ್ತು.

ADVERTISEMENT

ವಿಜಯ್ ಅವರ ಕೊನೆಯ ಸಿನಿಮಾ ಇದಾಗಿರುವುದರಿಂದ ಅಭಿಮಾನಿಗಳು ಭಾವುಕ ಆಗಿದ್ದರು. ನಿರ್ದೇಶಕ ಆಟ್ಲಿ, ವಿಜಯ್ ಅವರ ತಾಯಿ ಹಾಗೂ ಚಿತ್ರತಂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಇನ್ನು, ಕೆವಿಎನ್ ನ ವೆಂಕಟ್ ಕೆ.ನಾರಾಯಣ ನಿರ್ಮಾಣದ ಈ ದೊಡ್ಡ ಬಜೆಟ್ ಚಿತ್ರವನ್ನು ವಲಿಮೈ ಖ್ಯಾತಿಯ ಎಚ್. ವಿನೋತ್ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ ಅನಿರುದ್ಧ್‌ ರವಿಚಂದರ್ ಸಂಗೀತ, ಸತ್ಯನ್ ಸೂರ್ಯನ್ ಛಾಯಾಚಿತ್ರಗ್ರಹಣ, ಆನ್ಲ್ ಅರಸು ಸಾಹಸ, ಪ್ರದೀಪ್ ಇ. ರಾಘವ ಸಂಕಲನ, ಶೇಖರ್ ವಿ.ಜಿ., ಸುಧನ್ ನೃತ್ಯ ನಿರ್ದೇಶನವಿದೆ. ದಳಪತಿ ವಿಜಯ್ ನಟನೆಯ 69ನೇ ಚಿತ್ರ ಇದಾಗಿದ್ದು, 2026ರ ಜನವರಿ 9ರಂದು ಚಿತ್ರ ತೆರೆಗೆ ಬರಲಿದೆ.

ಈ ಸಿನಿಮಾದಲ್ಲಿ ನಟ ವಿಜಯ್ ಖದರ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ನಟ ವಿಜಯ್‌ ಅವರ 51ನೇ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಚಿತ್ರತಂಡ ಸಿನಿಮಾದ ಫಸ್ಟ್‌ಲುಕ್ ಬಿಡುಗಡೆ ಮಾಡಿತ್ತು. ʼಜನನಾಯಕನ್ʼ ಚಿತ್ರದ ಫಸ್ಟ್‌ ಲುಕ್‌ಗೆ ಉತ್ತಮ ಪ್ರತಿಕ್ರಿಯೆ ಕೂಡ ದೊರಕಿತ್ತು. ವಿಜಯ್ ಅವರು, ಸಿನಿಮಾಗಿಂತಲೂ ರಾಜಕೀಯದ ಕಡೆ ಹೆಚ್ಚಾಗಿ ಗಮನ ಹರಿಸುತ್ತಿದ್ದು, ತಮ್ಮದೇ ಹೊಸ ಪಕ್ಷದ ಕೆಲಸ ಕಾರ್ಯದಲ್ಲಿ ತೊಡಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.