ಚಿತ್ರಕೃಪೆ:Janhvi Kapoor
ಬಹುನಿರೀಕ್ಷಿತ ‘ಹೋಮ್‌ಬೌಂಡ್‘ ಸಿನಿಮಾದ ಬಿಡುಗಡೆ ಕಾರ್ಯಕ್ರಮದಲ್ಲಿ ಜಾಹ್ನವಿ ಅವರು ನೀಲಿ ಸೀರೆ ಧರಿಸಿ ನಟಿ ಶ್ರೀದೇವಿಯಂತೆ ಕಂಡಿರುವುದು ಪ್ರೇಕ್ಷಕರ ಗಮನ ಸೆಳೆದಿದೆ.
ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ವಿವಾಹದ ಸಂದರ್ಭದಲ್ಲಿ ಜಾಹ್ನವಿ ಕಪೂರ್ ಅವರ ತಾಯಿ ಶ್ರೀದೇವಿ ಇದೇ ಬಣ್ಣದ ಸೀರೆಯನ್ನು ಧರಿಸಿ ಮಿಂಚಿದ್ದರು. ಈ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ತಾಯಿಯಂತೆ ಕಾಣಿಸುತ್ತಿದ್ದೀರಾ ಎಂದು ಅಭಿಪ್ರಾಯ ತಿಳಿಸುತ್ತಿದ್ದಾರೆ.
ಉತ್ತರ ಭಾರತದ ಹಳ್ಳಿಯೊಂದರಲ್ಲಿ ಇಬ್ಬರು ಯುವಕರು ಉದ್ಯೋಗಕ್ಕಾಗಿ ಪಡುವ ಕಷ್ಟವನ್ನು ಆಧರಿಸಿ ‘ಹೋಮ್‌ಬೌಂಡ್‘ ಚಿತ್ರವನ್ನು ತಯಾರಿಸಲಾಗಿದೆ. ಈ ಸಿನಿಮಾವನ್ನು ನೀರಜ್ ಘಯ್ವಾನ್ ನಿರ್ದೆಶಿಸಿದ್ದು, ಇಶಾನ್ ಖಟ್ಟರ್, ವಿಶಾಲ್ ಜೇತ್ವಾ, ಜಾಹ್ನವಿ ಕಪೂರ್ ಸೇರಿಂದತೆ ಅನೇಕರು ನಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.