ನವದೆಹಲಿ: ಹರ್ಷವರ್ಧನ್ ಸಿಂಗ್ ದೇವ್, ರೆಹಮತ್ ರತ್ತನ್ ಮತ್ತು ರಣವೀರ್ ಶೋರೆ ನಟಿಸಿರುವ 'ಜಸ್ಸಿ ವೆಡ್ಸ್ ಜಸ್ಸಿ' ಸಿನಿಮಾ ನವೆಂಬರ್ 7 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ. ಪರಣ್ ಬಾವಾ ನಿರ್ದೇಶನದ ಮೊದಲ ಸಿನಿಮಾ ಇದಾಗಿದ್ದು, ‘ಕ್ರೇಜಿ ಫನ್ ರೈಡ್‘ ಎಂಬ ಟ್ಯಾಗ್‌ಲೈನ್ ನೀಡಿದ್ದಾರೆ.
ಈ ಚಿತ್ರದಲ್ಲಿ ಸಿಖಂದರ್ ಖೇರ್, ಮನು ರಿಷಿ ಚಡ್ಡಾ, ಸುದೇಶ್ ಲೆಹ್ರಿ ಮತ್ತು ಗ್ರುಷಾ ಕಪೂರ್ ನಟಿಸಿದ್ದಾರೆ. ಸೋಮಸಿಂಗ್ ಡಿಯೋ ಮತ್ತು ಮಜಾಹಿರ್ ಅಬ್ಬಾಸ್ ನಿರ್ಮಾಣ ಮಾಡಿದ್ದಾರೆ.
ಕಾಮಿಡಿ ಹಾಗೂ ಭಾವನಾತ್ಮಕ ವಿಷಯ ಆಧಾರಿತ ‘ಜಸ್ಸಿ ವೆಡ್ಸ್ ಜಸ್ಸಿ’ ಸಿನಿಮಾವು ಪ್ರೇಕ್ಷರ ಗಮನ ಸೆಳೆಯುತ್ತದೆ ಎಂದು ಚಿತ್ರ ತಂಡ ಹೇಳಿಕೊಂಡಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.