ADVERTISEMENT

ಅಜಯ್ ದೇವಗನ್-ಕಾಜೊಲ್ ಮಗಳು ಸಾಮಾಜಿಕ ತಾಣಗಳಲ್ಲಿ ಸುದ್ದಿಯಾಗಿದ್ದು ಯಾಕೆ?

​ಪ್ರಜಾವಾಣಿ ವಾರ್ತೆ
Published 4 ಜನವರಿ 2022, 6:10 IST
Last Updated 4 ಜನವರಿ 2022, 6:10 IST
ನ್ಯಾಸಾ
ನ್ಯಾಸಾ   

ಮುಂಬೈ: ಬಾಲಿವುಡ್‌ನ ತಾರಾ ದಂಪತಿ ಅಜಯ್ ದೇವಗನ್ ಹಾಗೂ ಕಾಜೊಲ್ ಪುತ್ರಿ ನ್ಯಾಸಾ ದೇವಗನ್ ಸಾಮಾಜಿಕ ತಾಣಗಳಲ್ಲಿ ಸುದ್ದಿಯಾಗಿದ್ದಾರೆ.

ಹೌದು, ಇನ್ನೂ ಸಿನಿಮಾ ಪ್ರಪಂಚಕ್ಕೆಕಾಲಿಟ್ಟಿಲ್ಲವಾದರೂ ಅವರು ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ನ್ಯಾಸಾ ಕೂಡ ಸಾಮಾಜಿಕ ತಾಣಗಳಲ್ಲಿ ಸಕ್ರಿಯರಾಗಿದ್ದು ಫೋಟೊಗಳು, ವಿಡಿಯೊಗಳನ್ನು ಹಂಚಿಕೊಳ್ಳುತ್ತಾರೆ. ಅಭಿಮಾನಿಗಳು ಕೂಡ ಅವರ ಪೋಸ್ಟ್‌ಗಳನ್ನು ಶೇರ್‌ ಮಾಡುತ್ತಾರೆ.

ಇತ್ತೀಚೆಗೆ ಕಪ್ಪು ಬಣ್ಣದ ದಿರಿಸು ಧರಿಸಿರುವ ಸೆಲ್ಪಿ ಫೋಟೊವನ್ನುನ್ಯಾಸಾ ಹಂಚಿಕೊಂಡಿದ್ದರು. ಇದನ್ನುಗಮನಿಸಿದ ಅಭಿಮಾನಿಗಳು, 2017ರಲ್ಲಿ ಇದೇ ಮಾದರಿಯ ಬಟ್ಟೆಯನ್ನು ಕಾಜೊಲ್‌ ಕೂಡ ಧರಿಸಿಕೊಂಡು ಮಿಂಚಿದ್ದರು ಎಂದು ಅಭಿಮಾನಿಗಳು ಕಾಮೆಂಟ್‌ ಮಾಡುತ್ತಿದ್ದಾರೆ.

ADVERTISEMENT

ನ್ಯಾಸಾ ಧರಿಸಿರುವ ಉಡುಪು ಕೂಡ ಕಾಜೊಲ್‌ ಹಾಕಿರುವುದೇಆಗಿದೆ. ಅಮ್ಮನ ಬಟ್ಟೆ ಮಗಳಿಗೂ ಬಂತು ಎಂದು ಮತ್ತೆ ಕೆಲವರು ಕಾಮೆಂಟ್‌ ಮಾಡುತ್ತಿದ್ದಾರೆ. ಇನ್ನು ಕೆಲವರು ನ್ಯಾಸಾ ಮತ್ತು ಕಾಜೊಲ್‌ ಫೋಟೊವನ್ನು ಶೇರ್‌ ಮಾಡಿ, ಅಮ್ಮ, ಮಗಳುಸೂಪರ್‌ ಜೋಡಿ ಎಂದು ಹೇಳುತ್ತಿದ್ದಾರೆ.

ನ್ಯಾಸಾ ಹಾಗೂ ಕಾಜೊಲ್ ಧರಿಸಿದ್ದ ಉಡುಗೆಗೆ ಸಾಮ್ಯತೆ ಇರುವುದರಿಂದ ಅಭಿಮಾನಿಗಳು ಚರ್ಚೆ ಮಾಡುತ್ತಿದ್ದಾರೆ.ಸದ್ಯ ನ್ಯಾಸಾ ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.