ADVERTISEMENT

ಕನಕೋತ್ಸವದಲ್ಲಿ ಚಂದನವದ ತಾರೆಯರ ಸಮಾಗಮ: ಚಿತ್ರಗಳು ಇಲ್ಲಿವೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಫೆಬ್ರುವರಿ 2026, 7:47 IST
Last Updated 2 ಫೆಬ್ರುವರಿ 2026, 7:47 IST
<div class="paragraphs"><p>ಕನಕೋತ್ಸವದಲ್ಲಿ ಚಂದನವದ ತಾರೆಯರು</p></div>

ಕನಕೋತ್ಸವದಲ್ಲಿ ಚಂದನವದ ತಾರೆಯರು

   

ಚಿತ್ರ: ಇನ್‌ಸ್ಟಾಗ್ರಾಂ

ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ತವರೂರಾದ ಕನಕಪುರದಲ್ಲಿ 2026ರ ಕನಕೋತ್ಸವ ಅದ್ಧೂರಿಯಾಗಿ ನಡೆದಿದೆ.

ADVERTISEMENT

ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ಸಹೋದರಿಬ್ಬರು ಸೇರಿಕೊಂಡು ಆಯೋಜಿಸಿದ್ದ ಕನಕೋತ್ಸವದ ಸಮಾರಂಭಕ್ಕೆ ಚಂದನವನದ ಜನಪ್ರಿಯ ತಾರೆಯರು ಭಾಗಿಯಾಗಿದ್ದರು.

ಜನವರಿ 28ರಿಂದ ಫೆಬ್ರುವರಿ 1ರವರೆಗೆ ಕನಕಪುರ ತಾಲ್ಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಕನಕೋತ್ಸವದಲ್ಲಿ ಚಂದನವನದ ತಾರೆಯರ ಸಮಾಗಮವಾಗಿದೆ.

ಈ ಕಾರ್ಯಕ್ರಮಕ್ಕೆ ನಟ ಶಿವರಾಜ್‌ಕುಮಾರ್, ಉಪೇಂದ್ರ, ರಚಿತಾ ರಾಮ್‌, ಡಾಲಿ ಧನಂಜಯ್, ರಿಷಬ್ ಶೆಟ್ಟಿ, ನಿರೂಪಕಿ ಅನುಶ್ರೀ ಸೇರಿದಂತೆ ಸಾಕಷ್ಟು ಕಲಾವಿದರು ಭಾಗಿಯಾಗಿದ್ದರು.

ನೇರಳೆ ಬಣ್ಣದ ಉಡುಪು ಧರಿಸಿ ನಿರೂಪಕಿ ಅನುಶ್ರೀ ಅವರು ಕನಕೋತ್ಸವದಲ್ಲಿ ಭಾಗಿಯಾಗಿದ್ದರು.

ಜನಪ್ರಿಯ ಬಹುಭಾಷಾ ಹಿನ್ನೆಲೆ ಗಾಯಕ ಮತ್ತು ಸಂಗೀತ ನಿರ್ದೇಶಕ ವಿಜಯ್ ಪ್ರಕಾಶ್ ಅವರು ಈ ಸಮಾರಂಭದಲ್ಲಿ ಭಾಗಿಯಾಗಿದ್ದರು.

ವಿಶೇಷವಾಗಿ ಕನ್ನಡ ಮತ್ತು ತೆಲುಗು ಚಿತ್ರರಂಗದ ಜನಪ್ರಿಯ ಹಿನ್ನೆಲೆ ಗಾಯಕಿ ಮತ್ತು ಜಾನಪದ ಕಲಾವಿದೆ ಮಂಗ್ಲಿ ಅವರು ರಸಮಂಜರಿ ಕಾರ್ಯಕ್ರಮ ನಡೆಸಿಕೊಟ್ಟರು.


ಗಾಯಕ, ನಟ ಮತ್ತು ಸಂಗೀತ ನಿರ್ದೇಶಕ, ಆಲ್ ಓಕೆ ಎಂದೇ ಪ್ರಸಿದ್ಧರಾಗಿರುವ ಅಲೋಕ್ ಆರ್ ಬಾಬು ಅವರು ಹಾಡು ಹಾಡಿದ್ದರು.

ಕನ್ನಡ ಚಿತ್ರರಂಗದ ಹಿನ್ನಲೆ ಗಾಯಕ ನವೀನ್ ಸಜ್ಜು ಹಾಡು ಹಾಡಿದ್ದರು. ಜೊತೆಗೆ ಡಿಕೆ ಶಿವಕುಮಾರ್ ಅವರ ಪತ್ನಿ ಜೊತೆಗೆ ನೃತ್ಯ ಮಾಡಿ ಮನರಂಜಿಸಿದರು.

ಕನ್ನಡದ ಗಾಯಕ ಹಾಗೂ ಬಿಗ್‌ಬಾಸ್‌ ಸೀಸನ್ 5ರ ವಿಜೇತ ಚಂದನ್‌ ಶೆಟ್ಟಿ ಅವರು ಕನಕೋತ್ಸವದಲ್ಲಿ ಹಾಡು ಹಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.