ADVERTISEMENT

ಕನ್ನಡದ ತಾರೆಯರ ಮನೆಯಲ್ಲಿ ಅದ್ಧೂರಿ ದೀಪಾವಳಿ ಸಂಭ್ರಮ: ಫೋಟೊಸ್ ಇಲ್ಲಿವೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಅಕ್ಟೋಬರ್ 2025, 12:35 IST
Last Updated 23 ಅಕ್ಟೋಬರ್ 2025, 12:35 IST
<div class="paragraphs"><p>ವಿಜಯಲಕ್ಷ್ಮಿ ದರ್ಶನ್, ನಿಖಿಲ್ ಕುಮಾರಸ್ವಾಮಿ ಕುಟುಂಬ,&nbsp;ರಾಧಿಕಾ ಕುಮಾರಸ್ವಾಮಿ</p></div>

ವಿಜಯಲಕ್ಷ್ಮಿ ದರ್ಶನ್, ನಿಖಿಲ್ ಕುಮಾರಸ್ವಾಮಿ ಕುಟುಂಬ, ರಾಧಿಕಾ ಕುಮಾರಸ್ವಾಮಿ

   

ಚಿತ್ರ: ಇನ್‌ಸ್ಟಾಗ್ರಾಮ್

ನಾಡಿನಾದ್ಯಂತ ಬೆಳಕಿನ ಹಬ್ಬ ದೀಪಾವಳಿಯನ್ನ ‌ವಿಜೃಂಭಣೆಯಿಂದ ಆಚರಿಸಲಾಗಿದೆ. ಹಾಗೇ ಕನ್ನಡದ ನಟ– ನಟಿಯರ ಕುಟುಂಬವು ದೀಪಾವಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ದೀಪಾವಳಿಯನ್ನು ಆಚರಿಸಿದ್ದಾರೆ.

ADVERTISEMENT

ಜೆಡಿಎಸ್ ಯು ಘಟಕದ ಅಧ್ಯಕ್ಷ,‌ ನಟ ನಿಖಿಲ್ ಕುಮಾರ್‌ಸ್ವಾಮಿ ಕುಟುಂಬ ಕೂಡ ದೀಪಾವಳಿ ಹಬ್ಬವನ್ನು ಆಚರಿಸಿದ್ದಾರೆ. ತಂದೆ ಹೆಚ್‌.ಡಿ ಕುಮಾರಸ್ವಾಮಿ, ತಾಯಿ ಅನಿತಾ, ಪತ್ನಿ ರೇವತಿ, ಪುತ್ರ ಅವ್ಯಾನ್ ದೇವ್ ಜೊತೆಗೆ ನಿಖಿಲ್ ಕುಮಾರಸ್ವಾಮಿ ಫೋಟೊವನ್ನು ಕ್ಲಿಕ್ಕಿಸಿಕೊಂಡಿದ್ದಾರೆ. 

ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಪ್ರಿಯಾಂಕಾ ಉಪೇಂದ್ರ ಮನೆಯಲ್ಲಿಯೂ ಕೂಡ ದೀಪಾವಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ.

ಪ್ರಿಯಾಂಕಾ ಉಪೇಂದ್ರ ಅವರು ತಮ್ಮ ನಿವಾಸಕ್ಕೆ  ಲೈಟ್‌ಗಳಿಂದ ಅಲಂಕರಿಸಿದ್ದಾರೆ. ಈ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. 

ನಟಿ ಅದಿತಿ ಪ್ರಭುದೇವ ಅವರು ತಮ್ಮ ಮುದ್ದಾದ ಮಗಳ ಜೊತೆಗೆ ದೀಪಾವಳಿ ಹಬ್ಬವನ್ನು ಆಚರಿಸಿದ್ದಾರೆ. ಅದಿತಿ ಪ್ರಭುದೇವ ಜೊತೆಗೆ ಮಗಳು ನೇಸರ ಫೋಟೊದಲ್ಲಿ ಕಾಣಿಸಿಕೊಂಡಿದ್ದಾಳೆ. 

ನಟಿ ರಾಧಿಕಾ ಕುಮಾರಸ್ವಾಮಿ ಅವರು ಕೂಡ ಪ್ರತಿ ವರ್ಷದಂತೆ ಈ ಬಾರಿಯೂ ದೀಪಾವಳಿ ಆಚರಿಸಿದ್ದಾರೆ. ಸುಂದರವಾದ ಫೋಟೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.