
ಚಿತ್ರ ಕೃಪೆ: @shetty_rishab
ಕಾಂತಾರ ಅಧ್ಯಾಯ–1 ಅ.2ರಂದು ವಿಶ್ವದಾದ್ಯಂತ ಬಿಡುಗಡೆಗೊಂಡು ಯಶಸ್ವಿ ಕಂಡಿದೆ. ಅನೇಕ ಪ್ರೇಕ್ಷಕರು, ಸಿನಿ ತಾರೆಯರು ಚಿತ್ರವನ್ನು ವೀಕ್ಷಿಸಿ ಮೆಚ್ಚಿಕೊಂಡಿದ್ದರು. ಇದೀಗ ಈ ಸಿನಿಮಾದ ನಿರ್ದೇಶಕ, ನಟ ರಿಷಬ್ ಶೆಟ್ಟಿ ಅವರು ಚಿತ್ರತಂಡ ಕುರಿತು ಅಭಿಪ್ರಾಯವನ್ನು ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.
ಚಿತ್ರತಂಡ ಕುರಿತು ಮಾತನಾಡಿರುವ ರಿಷಬ್ ಶೆಟ್ಟಿ, ‘ಕಾಂತಾರ ಚಿತ್ರೀಕರಣದ ಪ್ರತಿ ಸನ್ನಿವೇಶದಲ್ಲೂ ನೀವು ಎಲ್ಲರೂ ಅದ್ಭುತವಾಗಿ ಕೆಲಸ ಮಾಡಿದ್ದೀರಿ. ನಿಗದಿತ ವೇಳಾಪಟ್ಟಿಯನ್ನು ರೂಪಿಸುವುದರಿಂದ ಹಿಡಿದು, ಗಾಳಿ ಮಳೆಯಲ್ಲೂ ಸಿನಿಮಾ ಶೂಟಿಂಗ್‌ಗೆ ಸಹಕರಿಸಿದ್ದೀರಿ. ನಿಮ್ಮ ಉತ್ಸಾಹ ಮತ್ತು ತಂಡದ ಆತ್ಮವಿಶ್ವಾಸವೇ ಚಿತ್ರದ ಯಶಸ್ವಿಗೆ ಕಾರಣವಾಗಿದೆ. ಈ ಪ್ರಯಾಣದ ಭಾಗವಾಗಿರುವುದಕ್ಕೆ ತುಂಬಾ ಹೆಮ್ಮೆ ಆಗುತ್ತಿದೆ’ ಎಂದು ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ.
ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿರುವ, ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಅಧ್ಯಾಯ–1 ಜಾಗತಿಕ ಗಲ್ಲಾ ಪೆಟ್ಟಿಗೆಯಲ್ಲಿ ₹800 ಕೋಟಿಗೂ ಅಧಿಕ ಗಳಿಕೆ ಮಾಡಿದೆ ಎಂದು ಈ ಹಿಂದೆ ಚಿತ್ರತಂಡ ಬಹಿರಂಗ ಪಡಿಸಿತ್ತು. ರುಕ್ಮಿಣಿ ವಸಂತ್ ಗುಲ್ಶನ್ ದೇವಯ್ಯ , ಜಯರಾಮ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮಿನಾಡ್ ಸೇರಿದಂತೆ ಅನೇಕ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ.