ADVERTISEMENT

ಮಲ್ಟಿಪ್ಲೆಕ್ಸ್‌ ಟಿಕೆಟ್‌: ₹200ರ ಮಿತಿ; ಸಿನಿಮಾಗಳಿಗೆ ಏಕರೂಪದ ಟಿಕೆಟ್ ದರ ನಿಗದಿ

​ಪ್ರಜಾವಾಣಿ ವಾರ್ತೆ
Published 16 ಜುಲೈ 2025, 0:30 IST
Last Updated 16 ಜುಲೈ 2025, 0:30 IST
<div class="paragraphs"><p>ಮಲ್ಟಿಪ್ಲೆಕ್ಸ್‌&nbsp;</p></div>

ಮಲ್ಟಿಪ್ಲೆಕ್ಸ್‌ 

   
ಸಿನಿಮಾಗಳಿಗೆ ಏಕರೂಪದ ಟಿಕೆಟ್ ದರ ನಿಗದಿಗೆ ಕ್ರಮ | ಅನ್ಯ ಭಾಷೆಯ ಸಿನಿಮಾಗಳಿಗೆ ಟಿಕೆಟ್‌ ದರ ಗರಿಷ್ಠ ಮಿತಿ ಅನ್ವಯ | ಎಲ್ಲ ತೆರಿಗೆಗಳೂ ಸೇರಿ ಗರಿಷ್ಠ ದರ ₹200 ಮೀರುವಂತಿಲ್ಲ

ಬೆಂಗಳೂರು: ಮಲ್ಟಿಪ್ಲೆಕ್ಸ್‌ ಸಿನಿಮಾ ಮಂದಿರಗಳ ಟಿಕೆಟ್‌ ದರಕ್ಕೆ ಗರಿಷ್ಠ ₹200 ಮಿತಿ ಹೇರಿ, ರಾಜ್ಯ ಗೃಹ ಇಲಾಖೆ ಕರಡು ಅಧಿಸೂಚನೆಯನ್ನು ಮಂಗಳವಾರ ಹೊರಡಿಸಿದೆ.

‘ಕರ್ನಾಟಕ ಚಲನಚಿತ್ರ (ನಿಯಂತ್ರಣ) (ತಿದ್ದುಪಡಿ) ಮಸೂದೆ–2025’ರ ಕರಡು ಅಧಿಸೂಚನೆ ಇದಾಗಿದೆ.

ADVERTISEMENT

ಮಲ್ಟಿಪ್ಲೆಕ್ಸ್‌ಗಳಲ್ಲಿ ಅನ್ಯ ಭಾಷೆಯ ಸಿನಿಮಾಗಳಿಗೂ ಅನ್ವಯವಾಗುವಂತೆ, ತೆರಿಗೆ ಒಳಗೊಂಡು ಟಿಕೆಟ್‌ಗೆ ಗರಿಷ್ಠ ₹200 ವಿಧಿಸಬಹುದು ಎಂದು ಕರಡು ಅಧಿಸೂಚನೆ ವಿವರಿಸಿದೆ. ಈ ಅಧಿಸೂಚನೆಗೆ ಆಕ್ಷೇಪ ಸಲ್ಲಿಸಲು 15 ದಿನ ಅವಕಾಶ ನೀಡಲಾಗಿದೆ.

ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾಗಳ ಟಿಕೆಟ್‌ಗೆ ವಿಪರೀತ ದರ ನಿಗದಿ ಮಾಡಲಾಗುತ್ತಿದ್ದು, ಏಕರೂಪತೆ ಇಲ್ಲ. ವಿಪರೀತ ದರ ಇರುವ ಕಾರಣದಿಂದಲೇ ಜನರು ಸಿನಿಮಾಕ್ಕೆ ಬರುತ್ತಿಲ್ಲ. ಹೀಗಾಗಿ ಟಿಕೆಟ್‌ ದರಕ್ಕೆ ಮಿತಿ ಹೇರಬೇಕು ಎಂದು ನಿರ್ಮಾಪಕರು, ನಿರ್ದೇಶಕರು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದರು.

‘ಟಿಕೆಟ್‌ ದರವನ್ನು ₹200ಕ್ಕೆ ಮಿತಿಗೊಳಿಸುತ್ತೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಲವು ಬಾರಿ ಹೇಳಿದ್ದರು. ಈ ಸಾಲಿನ ಬಜೆಟ್‌ ಮೇಲಿನ ಚರ್ಚೆಯ ವೇಳೆಯೂ ಈ ವಿಷಯ
ಪ್ರಸ್ತಾಪವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.