ADVERTISEMENT

ಕೀರ್ತಿ ಸುರೇಶ್ ವಿವಾಹ: ಗೋವಾಗೆ ಜೊತೆಯಾಗಿ ಹೊರಟ ವಿಜಯ್, ತ್ರಿಶಾ; ಡೇಟಿಂಗ್ ವದಂತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಡಿಸೆಂಬರ್ 2024, 9:35 IST
Last Updated 14 ಡಿಸೆಂಬರ್ 2024, 9:35 IST
<div class="paragraphs"><p>ವಿಜಯ್‌ ಹಾಗೂ ತ್ರಿಶಾ</p></div>

ವಿಜಯ್‌ ಹಾಗೂ ತ್ರಿಶಾ

   

ಬಹುಭಾಷಾ ನಟಿ ಕೀರ್ತಿ ಸುರೇಶ್‌ ಮತ್ತು ಆ್ಯಂಥೋನಿ ಥೊಟ್ಟಿಲ್‌ ಅವರ ವಿವಾಹ ಸಮಾರಂಭಕ್ಕೆ ತೆರಳುವ ವೇಳೆ ನಟ, ರಾಜಕಾರಣಿ 'ದಳಪತಿ' ವಿಜಯ್‌ ಹಾಗೂ ನಟಿ ತ್ರಿಶಾ, ಜೊತೆಯಾಗಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದ್ದು, ಡೇಟಿಂಗ್‌ ವದಂತಿ ಕೇಳಿಬರುತ್ತಿದೆ.

ಕೀರ್ತಿ ಮತ್ತು ಆ್ಯಂಥೋನಿ ಅವರ ವಿವಾಹವು ಡಿಸೆಂಬರ್‌ 12ರಂದು ಗೋವಾದಲ್ಲಿ ನಡೆದಿದೆ. ಅದೇ ದಿನ ಬೆಳಿಗ್ಗೆ, ವಿಜಯ್‌ ಹಾಗೂ ತ್ರಿಶಾ ಅವರು ಖಾಸಗಿ ವಿಮಾನ ನಿಲ್ದಾಣದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಗೋವಾಕ್ಕೆ ಪ್ರಯಾಣ ಬೆಳೆಸಿದ್ದರು ಎನ್ನಲಾದ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಇದರ ಬೆನ್ನಲ್ಲೇ, ಡೇಟಿಂಗ್‌ ಕುರಿತು ಚರ್ಚೆ ನಡೆಯುತ್ತಿದೆ.

ADVERTISEMENT

ತ್ರಿಶಾ ಅವರು ಇತ್ತೀಚೆಗೆ (ಜೂನ್‌ 22ರಂದು) ವಿಜಯ್‌ ಅವರ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದರು. ಅದೂ, ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವದಂತಿಗಳ ಪ್ರಕಾರ, ಇವರಿಬ್ಬರೂ ರಿಲೇಷನ್‌ಷಿಪ್‌ನಲ್ಲಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಒಟ್ಟಾಗಿದ್ದಾರೆ ಎನ್ನಲಾಗುತ್ತಿದೆ.

ವಿಜಯ್‌ ಹಾಗೂ ತ್ರಿಶಾ ಅವರು ಹಲವು ವರ್ಷಗಳಿಂದ ಉತ್ತಮ ಸಂಬಂಧ ಹೊಂದಿದ್ದಾರೆ. ತಮಿಳು ಚಿತ್ರರಂಗದ ಜನಪ್ರಿಯ ಕಲಾವಿದರಾಗಿರುವ ಇವರಿಬ್ಬರೂ ಜೊತೆಯಾಗಿ ನಟಿಸಿರುವ ಹಲವು ಸಿನಿಮಾಗಳು ಹಿಟ್‌ ಆಗಿವೆ.

ರಾಜಕೀಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಯೋಜನೆಯಲ್ಲಿರುವ ವಿಜಯ್‌, ಸದ್ಯ ತಮ್ಮ ವೃತ್ತಿ ಬದುಕಿನ ಕೊನೇ ಸಿನಿಮಾ 'ದಳಪತಿ 69' ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಇದೇ ವೇಳೆ ತ್ರಿಶಾ ಅವರು ಅರ್ಧ ಡಜನ್‌ಗೂ ಹೆಚ್ಚು ಚಿತ್ರಗಳ ಶೂಟಿಂಗ್‌ನಲ್ಲಿ ಬ್ಯುಸಿ ಆಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.