ADVERTISEMENT

KGF | ಸಿನಿಮಾ ಬಿಡುಗಡೆಯಾಗಿ ಇಂದಿಗೆ ಮೂರು ವರ್ಷ; ಚಿತ್ರ ತಂಡದ ಸಂಭ್ರಮ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಡಿಸೆಂಬರ್ 2021, 10:42 IST
Last Updated 21 ಡಿಸೆಂಬರ್ 2021, 10:42 IST
2018ರ ಡಿಸೆಂಬರ್ 21ರಂದು ಕೆಜಿಎಫ್ ಚಾಪ್ಟರ್ 1 ಬಿಡುಗಡೆಯಾಗಿತ್ತು.
2018ರ ಡಿಸೆಂಬರ್ 21ರಂದು ಕೆಜಿಎಫ್ ಚಾಪ್ಟರ್ 1 ಬಿಡುಗಡೆಯಾಗಿತ್ತು.   

ಬೆಂಗಳೂರು: ಕನ್ನಡ ಚಿತ್ರರಂಗದಲ್ಲೇ ವಿಶೇಷ ಹವಾ ಸೃಷ್ಟಿಸಿ, ಬಾಲಿವುಡ್‌ ಕೂಡ ತಿರುಗಿ ನೋಡುವಂತೆ ಮಾಡಿದ ಚಿತ್ರ ‘ಕೆಜಿಎಫ್–ಚಾಪ್ಟರ್ 1‘ ಬಿಡುಗಡೆಯಾಗಿ ಇಂದಿಗೆ ಮೂರು ವರ್ಷ.

2018ರ ಡಿಸೆಂಬರ್ 21ರಂದು ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಾಪ್ಟರ್ 1 ಬಿಡುಗಡೆಯಾಗಿತ್ತು.

ಚಿತ್ರದ ಮುಂದಿನ ಭಾಗ ‘ಕೆಜಿಎಫ್–ಚಾಪ್ಟರ್ 2‘ ಸಿದ್ಧವಾಗಿದ್ದು, 2022ರ ಏಪ್ರಿಲ್ 14ರಂದು ತೆರೆಕಾಣುತ್ತಿದೆ.

ADVERTISEMENT

ನಟ ಯಶ್ ಮತ್ತು ನಟಿ ಶ್ರೀನಿಧಿ ಶೆಟ್ಟಿ ಅವರು ಕೆಜಿಎಫ್ ಸಿನಿಮಾದಲ್ಲಿ ಅಭಿನಯಿಸಿದ್ದು, ಬಾಲಿವುಡ್ ನಟ ಸಂಜಯ್ ದತ್ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ.

ಚಿತ್ರದ ಮೊದಲ ಚಾಪ್ಟರ್ ಬಿಡುಗಡೆಯಾಗಿ ಇಂದಿಗೆ ಮೂರು ವರ್ಷ ಪೂರ್ಣಗೊಂಡಿರುವ ಸಂದರ್ಭದಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಹೊಂಬಾಳೆ ಫಿಲ್ಮ್ಸ್ ಈ ಕುರಿತು ಟ್ವೀಟ್ ಮಾಡಿದ್ದಾರೆ.

ಚಿತ್ರಕ್ಕೆ ನೀವು ತೋರಿಸಿದ ಪ್ರೀತಿ, ಅಭಿಮಾನ ಮರೆಯಲಾಗದು. ನಮಗಿನ್ನೂ ಚಿತ್ರ ಬಿಡುಗಡೆಯ ಕ್ಷಣಗಳು ನೆನಪಾಗುತ್ತಿದ್ದು, ಶಿಳ್ಳೆ, ಚಪ್ಪಾಳೆಯ ಸದ್ದು ಕೇಳಿಸುತ್ತಿದೆ. ಮತ್ತೆ, ಏಪ್ರಿಲ್ 14ರಂದು ಕೆಜಿಎಫ್– ಚಾಪ್ಟರ್ 2 ಮೂಲಕ ಮತ್ತೆ ನಿಮ್ಮ ಮುಂದೆ ಬರಲಿದ್ದೇವೆ ಎಂದು ಚಿತ್ರತಂಡ ಟ್ವೀಟ್ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.